ಪುತ್ತೂರು ಕಡೆಯಿಂದ ಸುಳ್ಯದ ಮೂಲಕ ಮಡಿಕೇರಿ ಕಡೆಗೆ ದನ ಸಾಗಾಟ ಮಾಡುತ್ತಿದ್ದ ಎರಡು ವಾಹನಗಳಿಗೆ ಅರಂತೋಡಿನಲ್ಲಿ ಬಜರಂಗದಳದ ಕಾರ್ಯಕರ್ತರು ತಡೆಯೊಡ್ಡಿ ಸುಳ್ಯ ಪೋಲಿಸರ ವಶಕ್ಕೆ ಒಪ್ಪಿಸಿರುವ ಘಟನೆ ಇದೀಗ ವರದಿಯಾಗಿದೆ.
ಒಂದು ಪಿಕ ಅಪ್ ಮತ್ತು ಒಂದು ಟೆಂಪೊ ವಾಹನಗಳಲ್ಲಿ 8 ದನ ಕರುಗಳನ್ನು ಅಕ್ರಮವಾಗಿ ತುಂಬಿಸಿ ಕೊಂಡೊಯ್ಯುತ್ತಿರುವ ವಿಷಯ ತಿಳಿದ ಸಂಘಟನೆಯ ಕಾರ್ಯಕರ್ತರು ಅರಂತೋಡಿನಲ್ಲಿ ನಿಲ್ಲಿಸಿ ವಿಚಾರಣೆ ನಡೆಸಿದರು. ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವ ಕುರಿತು ಪೋಲಿಸರಿಗೆ ವಿಷಯ ತಿಳಿಸಿರುತ್ತಾರೆ.ಸ್ಥಳಕ್ಕೆ ಪೋಲಿಸರು ತೆರಳಿ ಎರಡು ವಾಹನಗಳನ್ನು ಹಾಗೂ ಅದರಲ್ಲಿ ಇದ್ದ ಮೂರು ಮಂದಿಯನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.