ಜಾಲ್ಸೂರು : 48 ನೇ ವರುಷದ ಏಕಾಹ ಭಜನೆಗೆ ಚಾಲನೆ

0

ಜಾಲ್ಸುರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ 48ನೇ ವರ್ಷದ ಏಕಾಹ ಭಜನೆಗೆ ಇಂದು ಬೆಳಗ್ಗೆ ದೀಪ ಪ್ರತಿಷ್ಠೆಯೊಂದಿಗೆ ಚಾಲನೆ ನೀಡಲಾಯಿತು.ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು, ಸದಸ್ಯರು, ಊರಿನವರು ಉಪಸ್ಥಿತರಿದ್ದರು.

ನಾಳೆ ಬೆಳಗ್ಗಿನವರಿಗೆ ನಡೆಯುವ ಭಜನಾ ಸೇವೆಯಲ್ಲಿ ಹಲವು ಭಜನಾ ತಂಡಗಳು ಭಾಗಿಯಾಗಲಿವೆ.

ಬೆಳಗ್ಗೆ 9:30ಕ್ಕೆ ನಾಗತಂಬಿಲ ನಡೆದ ಬಳಿಕ ಮಧ್ಯಾಹ್ನ ಪೂಜೆ, ಸಂಜೆ ಅಲಂಕಾರ ಪೂಜೆ ರಾತ್ರಿ 1 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ನಾಳೆ ಬೆಳಿಗ್ಗೆ ಮಂಗಳಾಚರಣೆ, ದೀಪ ವಿಸರ್ಜನೆ, ಪ್ರಸಾದ ವಿತರಣೆ ನಡೆಯಲಿದೆ.