ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ಭರದಿಂದ ನಡೆಯುತ್ತಿದೆ. ಕಂಪೆನಿಗಳು ಬಯಸುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರನ್ನು ನೇಮಕಾತಿಗಾಗಿ ಸಜ್ಜುಗೊಳಿಸಲಾಗುತ್ತಿದೆ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಇದುವರೆಗೆ ಕಾರ್ಪೋರೇಟ್ ಜಗತ್ತಿನ ೨೫ ಹೆಸರಾಂತ ಕಂಪೆನಿಗಳು ಪಾಲ್ಗೊಂಡಿವೆ. ಸಾಪ್ ಲ್ಯಾಬ್, ಐವೇವ್, ಪೇ ಹಡ್ಲ್, ಡೆಲ್ಟಾಕ್ಸ್, ಸೆಲ್ಕೋ ಸೋಲಾರ್ ಪವರ್, ಯುನಿಕೋರ್ಟ್, ಸೈನ್‌ಡೆಸ್ಕ್, ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್, ಸಾಸ್ಕೆನ್, ಇಜಿಡಿಕೆ ಸೋಫ್ರೋಸೈನ್ಸ್ ಸೆಮಿಕಂಡಕ್ಟರ್ ಮುಂತಾದ ಕಂಪೆನಿಗಳು ಕಾಲೇಜಿಗೆ ಆಗಮಿಸಿ ಪ್ರಕ್ರಿಯೆಯನ್ನು ನಡೆಸಿವೆ. ವಾರ್ಷಿಕ ೫ ಲಕ್ಷದಿಂದ ಪ್ರಾರಂಭಿಸಿ ೧೫ ಲಕ್ಷದವರೆಗಿನ ವೇತನವನ್ನು ಗಳಿಸುವ ಹುದ್ದೆಗೆ ನೇಮಕಾತಿ ನಡೆದಿದೆ. ೩೪ ವಿದ್ಯಾರ್ಥಿಗಳು ಈಗಾಗಲೇ ನೇಮಕಾತಿ ಆದೇಶವನ್ನು ಪಡೆದುಕೊಂಡಿದ್ದಾರೆ. ೧೧ ಕಂಪೆನಿಗಳ ಅಂತಿಮ ಸುತ್ತಿನ ಪ್ರಕ್ರಿಯೆ ನಡೆಯಬೇಕಿದ್ದು, ಫಲಿತಾಂಶ ಇನ್ನಷ್ಟೇ ಹೊರ ಬೀಳಬೇಕಿದೆ. ಕಂಪ್ಯೂಟರ್‌ಸೈನ್ಸ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಡಾಟಾ ಸೈನ್ಸ್, ಇಲೆಕ್ಟಾನಿಕ್ಸ್ ಎಂಡ್ ಕಮ್ಯುನಿಕೇಶನ್, ಮೆಕ್ಯಾನಿಕಲ್, ಸಿವಿಲ್ ಮತ್ತು ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗಗಳ ಅರ್ಹ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಪ್ರತಿಷ್ಟಿತ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದು, ಇನ್ನೂ ಹೆಚ್ಚಿನ ಹೆಸರಾಂತ ಕಂಪೆನಿಗಳು ಕಾಲೇಜಿಗೆ ಆಗಮಿಸಲಿವೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.