ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು (ಡಿ.12) ನೀರು ಬಂಡಿ ಉತ್ಸವ ನಡೆಯಲಿದೆ.
ನ.27 ರಂದು ಕೊಪ್ಪರಿಗೆ ಏರಿ ಆರಂಭವಾಗಿದ್ದ ಷಷ್ಠಿ ಮಹೋತ್ಸವ ಇಂದಿಗೆ ಮುಗಿಯಲಿದೆ. ನೀರು ಬಂಡಿ ಉತ್ಸವ ನಡೆಯಲಿದ್ದು ಹೊರಾಂಗಣದಲ್ಲಿ ಬಂಡಿ ತೆರು ಎಳೆಯಲ್ಪಡಲಿದೆ. ಬಳಿಕ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆಯಲಿದೆ. ಬಳಿಕ ಶ್ರೀ ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಲಿದೆ.
ಡಿ.13 ರ ಬೆಳಗ್ಗೆ ಕುಮಾರಧಾರ ನದಿಯಲ್ಲಿ ಪುರುಷರಾಯ ದೈವದಿಂದ ಮತ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಆಹಾರ ನೀಡಲಿದೆ.