ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಇದರ ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳು ಆಯೋಜಿಸಿದ ಶೈಕ್ಷಣಿಕ ಪ್ರವಾಸವು ಊಟ,ಪಾಠ,ಆಟದೊಂದಿಗೆ ಮಾದರಿಯಾಗಿ ನಾಡಿನ ಗಮನ ಸೆಳೆಯಿತು.ಮೊಗರ್ಪಣೆ ಮಖಾಂ ಝಿಯಾರತ್ ನೊಂದಿಗೆ ಆರಂಭಗೊಂಡ ಎರಡು ದಿನಗಳ ಕೇರಳ ಯಾತ್ರೆಯು ವಿದ್ಯಾರ್ಥಿ ಜೀವನದ ಮಾಯದ ಪುಟದಲ್ಲಿ ದಾಖಲ್ಪಟ್ಟಿದೆ.ಪ್ರವಾಸದಲ್ಲಿ ನಾಲೇಜ್ ಸಿಟಿ,ಮರ್ಕಝ್ ಮುಂತಾದ ಶೈಕ್ಷಣಿಕ ಕೇಂದ್ರಗಳನ್ನು ಭೇಟಿಯಾಗಿ ವಿದ್ಯೆಯ ವೈವಿಧ್ಯತೆ ಮತ್ತು ವಿಶಾಲತೆಯನ್ನು ಗಮನಿಸಿ ನಿಬ್ಬೆರಗುಗೊಂಡ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಭವಿಷ್ಯ ಕಟ್ಟುವ ಕನಸಿನತ್ತ ಸಾಗಿದರು.ಜ್ಞಾನ ಗೋಪುರಗಳ ರೂವಾರಿ,ವಿದ್ವಾಂಸರ ರಾಜಕುಮಾರ,ಇಂಡಿಯನ್ ಗ್ಯ್ರಾಂಡ್ ಮುಫ್ತಿ ಎ ಪಿ ಉಸ್ತಾದರ ಭೇಟಿ ಮತ್ತು ಆಶಿರ್ವಾದ ವಿದ್ಯಾರ್ಥಿಗಳಿಗೆ ರೋಮಾಂಚನವಾಯಿತು.
ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಾದ ಮಡವೂರ್ ಮಖಾಂ,ಸಂಶುಲ್ ಉಲಮಾ ಮಖಾಂ,ತಾಜುಲ್ ಉಲಮಾ ಮಖಾಂ,ಪಾರಪ್ಪಳ್ಳಿ ಮಖಾಂ ಮುಂತಾದ ಪುಣ್ಯ ಸ್ಥಳಗಳ ಸಂದರ್ಶನದಿಂದ ಧನ್ಯರಾದರು.ವಿವಿಧ ಬಗೆಯ ಮೃಗಗಳ ವೀಕ್ಷಣೆ,ಪ್ರಕೃತಿಯ ಸೌಂಧರ್ಯ ಆಶ್ವಾದನೆ ಮಾಡಿದರು. ಪಾರ್ಕ್,ಮಾಲ್ ಬೀಚ್ ಗಳಲ್ಲಿ ವಿದ್ಯಾರ್ಥಿಗಳು ಸಂತಸ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.ಸಾಂಧರ್ಭಿಕ ತರಗತಿಗಳು,ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮತ್ತು ಪರಿಸರ ಪ್ರೇಮದ ವಿವರಣೆಗಳಿಂದ ಪ್ರವಾಸವು ಸಂಪನ್ನಗೊಂಡಿತು.
ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಶೈಕ್ಷಣಿಕ ಪ್ರವಾಸಕ್ಕೆ ನೇತೃತ್ವ ವಹಿಸಿದ ಮದ್ರಸ ಮುಖ್ಯೋಪಾಧ್ಯಾಯ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಯವರು ಊರಿನ ಪ್ರಶಂಸೆಗೆ ಪಾತ್ರರಾದರು.