ದ.16 ರಿಂದ ಜ.14 ತನಕ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಧನು ಪೂಜೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ
ದ.16 ರಿಂದ ಜ.14 ರ ತನಕ
ಧನು ಪೂಜೆ ಜರುಗಲಿದೆ.
ಧನು ಪೂಜೆ ಬೆಳಿಗ್ಗೆ 5:30ಕ್ಕೆ ನಡೆಯಲಿದೆ. ಈ ವೇಳೆ ರುದ್ರಾಭಿಷೇಕ, ಧನು ಪೂಜೆ, ಹಣ್ಣುಕಾಯಿ, ಕುಂಕುಮಾರ್ಚನೆ, ಪಂಚಕಜ್ಜಾಯ ಸೇವೆ ನಡೆಯಲಿರುವುದು.ಪ್ರತೀ ದಿನ ಫಲಾಹಾರ
ವ್ಯವಸ್ಥೆ ಇರುತ್ತದೆ. ಒಂದು ತಿಂಗಳ ಕಾಲ ದೇವರಿಗೆ ಪ್ರಾತಃ ಕಾಲ 5.30ಕ್ಕೆ ಧನು ಪೂಜೆ ಇರುವುದರಿಂದ ಬೆಳಗ್ಗಿನ 8 ಗಂಟೆಯ ಪೂಜೆ ಇರುವುದಿಲ್ಲ. ಧನು ಪೂಜೆಗೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.