ಸುಳ್ಯ ತಾಲೂಕು ಯಾದವ ಕ್ರೀಡಾಕೂಟ -2024 ಉದ್ಘಾಟನೆ

0

ಡಿ.25ರಂದು ಸುಳ್ಯ ತಾಲೂಕು ಯಾದವ ಸಮಾವೇಶ

ಸುಳ್ಯ ತಾಲೂಕು ಯಾದವ ಸಮಾವೇಶವು ಡಿ.25ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಯಾದವ ಕ್ರೀಡಾಕೂಟ -2024 ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಕ್ರೀಡಾಂಗಣದಲ್ಲಿ ಡಿ.15ರಂದು ನಡೆಯಿತು.

ಕ್ರೀಡಾಕೂಟವನ್ನು ನಿವೃತ್ತ ಶಿಕ್ಷಕ ಹಾಗೂ ಸುಳ್ಯ ತಾಲೂಕು ಯಾದವ ಸಭಾ ನಿಕಟಪೂರ್ವ ಅಧ್ಯಕ್ಷ ಕಣಕ್ಕೂರು ಕೊರಗಪ್ಪ ಮಾಸ್ತರ್ ಅವರು ದೀಪಬೆಳಗಿಸಿ, ಉದ್ಘಾಟಿಸಿದರು.

ರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ ಬೊಳ್ಳಾಜೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಇಂಚರ ಆಲೆಟ್ಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸುಳ್ಯ ತಾಲೂಕು ಯಾದವ ಸಭಾ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಉಪಸ್ಥಿತರಿದ್ದರು. ಯುವವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಸ್ವಾಗತಿಸಿ, ಬೆಟ್ಟ ಪ್ರಾದೇಶಿಕ ಸಮಿತಿಯ ಸುಮಿತ್ರ ವಂದಿಸಿದರು. ಯುವ ವೇದಿಕೆ ಕಾರ್ಯದರ್ಶಿ ತೀರ್ಥೇಶ್ ದುಗಲಡ್ಕ ಕಾರ್ಯಕ್ರಮ ನಿರೂಪಿಸಿದರು‌.

ಯಾದವ ಕ್ರೀಡಾಕೂಟದ ಪ್ರಯುಕ್ತ ಯಾದವ ಸಮುದಾಯ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗುತ್ತಿದೆ.