ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ

0

ಪ್ರತೀ ವರ್ಷವೂ ಹಿರಿಯ ವಿದ್ಯಾರ್ಥಿ ಸಂಘದಿಂದ ಸಮಾವೇಶ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶವು ಕಾಲೇಜಿನ ಸಭಾಂಗಣದಲ್ಲಿ ಡಿ.15ರಂದು ನಡೆಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ಅಧ್ಯಕ್ಷತೆ ವಹಿಸಿದ್ದರು. ಈ ಬಾರೀ ನೂತನ ಸಮಿತಿ ರಚನೆಯಾಗಿದ್ದು, ಹಿರಿಯ ವಿದ್ಯಾರ್ಥಿಗಳ ಸದಸ್ಯತ್ವಕ್ಕಾಗಿ ರೂ.200 ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಕಲಿತಿರುವ ಹಲವರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಈಗಾಗಲೇ ಸಂಸ್ಥೆಯ ‌ವೇದಿಕೆ‌ ನವೀಕರಣದಲ್ಲಿ ಸಂಘ ಸಹಕಾರ ನೀಡಿದ್ದು, ಕಾಲೇಜಿನ ಕಾಂಪೌಂಡ್ ರಚನೆಗೂ‌ ಸಹಕಾರ ನೀಡುತ್ತಿದೆ ಎಂದ ಅವರು ಮುಂದಿನ ಪ್ರತೀ‌ವರ್ಷವೂ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಂಡು, ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಮತ್ತೆ ಈ ಸಂಸ್ಥೆಯಲ್ಲಿ ಬೆರೆಯುವ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ ಯವರು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕೆಲಸ ಕಾರ್ಯವನ್ನು ಶ್ಲಾಘಿಸಿದರು.

ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು‌ ಮಾತನಾಡಿ “ಸಂಸ್ಥೆಗೆ ಮುಂದಿನ ವರ್ಷ 75 ತುಂಬುತ್ತದೆ. ಈ ವರ್ಷದಲ್ಲಿ ಪ್ರತೀ ತಿಂಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳೋಣ. ಕಾರ್ಯಕ್ರಮ ಸ್ಮರಣೀಯ ಗೊಳಿಸಲು ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ” ಎಂದು ಹೇಳಿದರು.

ನಿವೃತ್ತ ಪ್ರೊ.‌ಕುಶಾಲಪ್ಪ ಗೌಡ ಡಿ.ಎಸ್., ಪದ್ಮಶ್ರೀ ಡಾ.ಗಿರೀಶ್ ಭಾರದ್ವಾಜ್, ಪ್ರಥಮ‌ ಬ್ಯಾಚ್ ನ ವಿದ್ಯಾರ್ಥಿ ಸಂಕಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಮಾಜಿ ಕಾರ್ಯದರ್ಶಿ ಡಿ.ಎಸ್.ಗಿರೀಶ್ ಮಾತನಾಡಿ ಅನಿಸಿಕೆ ವ್ಯಕ್ತ ಪಡಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ.ರಂಗಯ್ಯ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಕೋಶಾಧಿಕಾರಿ ಕೆ.ಟಿ.ವಿಶ್ವನಾಥ ವೇದಿಕೆಯಲ್ಲಿದ್ದರು.

ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಆಗಮಿಸಿದ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಕಲಿತ ಹಾಗೂ ಆ ಬಳಿಕ ಜೀವನ ರೂಪಿಸಿಕೊಂಡಿರುವ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.