ಕೊನ್ನಡ್ಕ: ನಾಪತ್ತೆಯಾಗಿದ್ದ ವೃದ್ಧ ಅನಾರೋಗ್ಯ ಸ್ಥಿತಿಯಲ್ಲಿ ಪತ್ತೆ, ಆಸ್ಪತ್ರೆಗೆಯಲ್ಲಿ ನಿಧನ

0

ಬಳ್ಪ ಗ್ರಾಮದ ಕೊನ್ನಡ್ಕ ನಿವಾಸಿ ಮಾಣಿ ಮುಗೇರ ಎಂಬವರು ಕೂಲಿ ಕೆಲಸಕ್ಕೆ ಹೋದವರು ಡಿ. 13ರಂದು ಕಾಣೆಯಾಗಿದ್ದು, ಡಿ. 15ರಂದು ಪತ್ತೆಯಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಡಿ. 15ರಂದು ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು. ಬೀದಿಗುಡ್ಡೆ ಬಳಿ
ಸ್ಥಳೀಯರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪೊದೆಯಿಂದ ನರಳುವ ಧ್ವನಿ ಕೇಳಿಸಿ ಅವರು ಮಾಣಿ ಮುಗೇರರ ಮನೆಗೆ ವಿಷಯ ತಿಳಿಸಿ ಬಳಿಕ ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದರು. ಅಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿರುವುದಾಗಿ ತಿಳಿದುಬಂದಿದೆ. ಮೃತರು ಪುತ್ರರಾದ ಜಯಪ್ರಕಾಶ್, ರಮೇಶ್, ಪುತ್ರಿ ಶ್ರೀಮತಿ ಲಲಿತಾ ಸೇರಿದಂತೆ ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.