ಐವರ್ನಾಡಿನಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ : ಪೂರ್ವಭಾವಿ ಸಭೆ – ಸಮಿತಿ ರಚನೆ

0

ಸಂಚಾಲಕರಾಗಿ ವಾಸುದೇವ ಬೊಳುಬೈಲು,ಅಧ್ಯಕ್ಷರಾಗಿ ಸಾತ್ವಿಕ್ ಕುದುಂಗು ಆಯ್ಕೆ

ಐವರ್ನಾಡಿನಲ್ಲಿ ಎಸ್.ಎನ್ .ಮನ್ಮಥರ ನೇತೃತ್ವದಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯು ಡಿ.15 ರಂದು ಐವರ್ನಾಡಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಬಡ್ಡಿ ಆಟಗಾರ ಸಚಿನ್ ಪ್ರತಾಪ್ ಸಲಹೆ ನೀಡಿದರು.

ರಾಜ್ಯದಿಂದ 12 ಬಲಿಷ್ಠ ತಂಡಗಳನ್ನು
ತರುವುದು ಮತ್ತು ಪಂದ್ಯಾವಳಿಯ ನ್ನು ನಡೆಸುವ ಬಗ್ಗೆ ಸಮಾಲೋಚನೆ ಮಾಡಲಾಯಿತು. ಹಾಗೂ ಸಮಿತಿ ರಚನೆ ಮಾಡಲಾಯಿತು.


ಸಂಚಾಲಕರಾಗಿ ವಾಸುದೇವ ಬೊಳುಬೈಲು, ಅಧ್ಯಕ್ಷರಾಗಿ ಸಾತ್ವಿಕ್ ಕುದುಂಗು ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ
ಸತೀಶ್ ಮಡ್ತಿಲ,ಮೋಹನ್ ಸುಂದರ್, ರಾಜೇಶ್ ನೆಕ್ರೆಪ್ಪಾಡಿ, ಸತೀಶ್ ಜಬಳೆ, ಜುನೈದ್ ನಿಡುಬೆ, ತೋಮಸ್ ಬಾಂಜೀಕೊಡಿ, ಬಾಲಕೃಷ್ಣ ಮಡ್ತಿಲ, ರಮೇಶ್ ಮಿತ್ತಮೂಲೆ, ಸುಂದಲಿಗಂ, ರವಿರಾಜ್ ಪೂಜಾರಿಮನೆ,ಶರತ್ ಜಬಳೆ, ಸಚಿನ್ ಕೊಚ್ಚಿ, ಜೆ.ಟಿ.ವೆಂಕಪ್ಪ ಗೌಡ, ಸುನಿಲ್ ಕೋಂದ್ರಮಜಲು, ಬಾಲಕೃಷ್ಣ ಕೀಲಾಡಿ,ಯತೀಶ್, ರೋಹಿತ್ ಬಾಂಜಿಕೋಡಿ ಹಾಗೂ ಕಬಡ್ಡಿ ಆಟಗಾರರು ಸಲಹೆ ಸೂಚನೆಗಳನ್ನು ನೀಡಿದರು