ಸಮಿತಿ ರಚನೆ: ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಪ್ರ. ಕಾರ್ಯದರ್ಶಿ : ಅಶೋಕ ಪ್ರಭು, ಕೋಶಾಧಿಕಾರಿ : ಉದಯ ಕುಡೆಕಲ್ಲು
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ಉಳ್ಳಾಕುಲು ಚಾವಡಿಯ ಪ್ರತಿಷ್ಠಾ ಕಲಶೋತ್ಸವವು 2025 ರ ಫೆಬ್ರವರಿ 2,3 ರಂದು ನಡೆಯಲಿದ್ದು ಇದರ ಪೂರ್ವ ಭಾವಿ ಸಭೆಯು ಡಿ.15 ರಂದು ದೇವಳದಸಭಾಭವನದಲ್ಲಿ ನಡೆಯಿತು.
ಉಳ್ಳಾಕುಲು ಚಾವಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಕುಂಟಾರು ಕ್ಷೇತ್ರದ ತಂತ್ರಿವರ್ಯರ
ನಿರ್ದೇಶನದಂತೆ
ಪೂರ್ವಸಿದ್ಧತೆ ಮತ್ತು ಆಮಂತ್ರಣ ಪತ್ರ ಮುದ್ರಿಸುವ ಕುರಿತು ಚರ್ಚಿಸಲಾಯಿತು.
ಮುಂದಿನ 2025 ರ ಕಾಲಾವಧಿಜಾತ್ರೋತ್ಸವದ ಕುರಿತು ಹಾಗೂ7 ದಿನಗಳ ಕಾಲ ದೇವಳದಲ್ಲಿ ಭಾಗವತ: ಸಪ್ತಾಹವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಪ್ರತಿಷ್ಠಾ ಕಲಶೋತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು.
ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಗುಂಡ್ಯ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು,
ಸೇ. ಸ.ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು,ವ್ಯ.ಸ.ಮಾಜಿ ಅಧ್ಯಕ್ಷಪ್ರಸನ್ನಕೆ.ಸಿ.ಬಡ್ಡಡ್ಕ,ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ,
ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,
ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ, ಹರಿಪ್ರಸಾದ್ ಕಾಪುಮಲೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಮಮತಾ ನಾರ್ಕೋಡು ಹಾಗೂ ಹರೀಶ್ ಕೊಯಿಂಗಾಜೆ, ಸುಧಾಕರ ಆಲೆಟ್ಟಿ, ಯತಿರಾಜ್ ಭೂತಕಲ್ಲು, ನಾರಾಯಣ ರೈ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಅರ್ಚಕ ಹರ್ಷಿತ್ ಬನ್ನಿಂತಾಯ, ಸುಂದರ ಹೊಳ್ಳ,ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ,ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ, ಉದಯ ಕುಡೆಕಲ್ಲು, ಶ್ರೀನಾಥ್ ಆಲೆಟ್ಟಿ, ದಿನೇಶ್ ಆಲೆಟ್ಟಿ, ಜಯರಾಮಅರಂಬೂರು, ನವೀನ್ ಆಲೆಟ್ಟಿ, ವಿಜಯಕುಮಾರ್ ಆಲೆಟ್ಟಿ,ಅವಿನ್ ಆಲೆಟ್ಟಿ, ರಾಮಚಂದ್ರ ಬಾಳೆಹಿತ್ಲು, ದಿವಾಕರ ಭೂತಕಲ್ಲು, ಪ್ರದೀಪ್ ಆಲೆಟ್ಟಿ, ರಚನ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.