ಅರಂತೋಡು ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಸಮಾರೋಪ

0


ಮರಣಾ ನಂತರದ ಜೀವನವೇ ಶಾಸ್ವತ – ಖ್ಯಾತ ವಾಗ್ಮಿ ಅಬೂಬಕ್ಕರ್ ಸಿದ್ಧಿಕ್ ಅಝ್ಹರಿ


ಬೌಧಿಕ ಲೋಕದಲ್ಲಿ ನಾವು ಅಲ್ಲಾಹುವನ್ನು ಮರೆತಿದ್ದೇವೆ. ನಮ್ಮ ಶರೀರಕ್ಕೆ ದೇವರು ಸಮಯ ನಿಗಧಿಪಡಿಸಲಾಗಿದೆ, ಮರಣ ಎಂಬುದು ಖಚಿತ, ಆದುದರಿಂದ ಮರಣಾನಂತರದ ಜೀವನವೇ ಶಾಶ್ವತ ಎಂದು ಖ್ಯಾತ ವಾಗ್ಮಿ ಬಹು| ಅಬೂಬಕ್ಕರ್ ಸಿದ್ಧೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು. ಅವರು ಡಿ.17 ರಂದು ಅರಂತೋಡು ಎಸ್.ಕೆ.ಎಸ್.ಎಸ್.ಎಪ್ ಶಾಖೆ ವತಿಯಿಂದ ನಡೆದ ಏಕದಿನ ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ಜುಬೈರ್ ಎಸ್.ಇ ವಹಿಸಿದರು.

ದುವಾವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ನೆರವೇರಿಸಿದರು. ಅತಿಥಿಗಳಾಗಿ ಪೇರಡ್ಕ ಜುಮಾ ಮಸೀದಿ ಖತೀಬ್ ಅಹಮ್ಮದ್ ನಈಮ್ ಫೈಝಿ, ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ , ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಇಬ್ರಾಹಿಂ ಹಾಜಿ ಕತ್ತರ್, ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಬೆಳ್ಳಾರೆ, ಸುಳ್ಯ ವಲಯ ಅಧ್ಯಕ್ಷ ಅಬೂಬಕ್ಕರ್ ಪೋಪಿ, ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಕರಾವಳಿ, ಉಧ್ಯಮಿ ಶಾಫಿ ಕುತ್ತಮೊಟ್ಟೆ, ಸದರ ನೌಶಾದ್ ಅಝ್ಹರಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಲತೀಫ್ ಅಡ್ಕಾರ್, ಸುಳ್ಯ ಜಮೀಯ್ಯತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಎ.ಹೆಚ್.ವೈ.ಎ ಅಧ್ಯಕ್ಷ ಅಬ್ದುಲ್ ಮಜೀಬ್ ಎಸ್.ಎಂ, ಪಠೇಲ್ ಚಾರಿಟೇಬಲ್ ಅಧ್ಯಕ್ಷ ಬದುರುದ್ದೀನ್ ಪಠೇಲ್, ಯುವ ಉಧ್ಯಮಿ ಸೈಫುದ್ಧೀನ್ ಪಠೇಲ್, ಆಶಿಕ್ ಕುಕ್ಕುಂಬಳ, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ, ಮಂಡೆಕೋಲು ಜುಮಾ ಮಸೀದಿ ಅಧ್ಯಕ್ಷ ರಾಫಿ ಶಾಲೆಕ್ಕಾರ್, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಸಂಶುದ್ಧೀನ್ ಪೆಲ್ತಡ್ಕ್ಕ, ಫಸೀಲು ಮೊದಲಾದವರು ಉಪಸ್ಥಿತರಿದ್ದರು. ವಿಕಾಯ ಸದಸ್ಯ ತಾಜುದ್ಧೀನ್ ಅರಂತೋಡು ಸ್ವಾಗತಿಸಿದರು. ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್ ವಂಧಿಸಿದರು. ಮುಝಮ್ಮಿಲ್ ಕುಕ್ಕುಂಬಳ ನಿರೂಪಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು.