ಅಪಘಾತದಲ್ಲಿ ಕೈಗೆ ಗಂಭೀರ ಗಾಯಗಳಾಗಿದ್ದ ವ್ಯಕ್ತಿ ಮಂಗಳೂರು ಆಸ್ಪತ್ರೆಗೆ

0

ಸಂಕಷ್ಟದಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲು ಸಹಕಾರ ನೀಡಿದ ಸುಳ್ಯದ ಮುಖಂಡರು

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಡಿ 15 ರಂದು ರಾತ್ರಿ ಬಸ್ಸು ನಿಲ್ದಾಣ ಬಳಿ ಮಲಗಿದ್ದ ಕಾರ್ಮಿಕ ವ್ಯಕ್ತಿಗೆ ವಾಹನ ಅಪಘಾತ ವಾಗಿ ಬಲಗೈಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಸೇರಿ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಕೈಗೆ ಗಂಭೀರಗಾಯಗೊಂಡಿದ್ದ ಅವರನ್ನು ಪ್ರಥಮ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.

ಆದರೆ ಗಯಾಳು ದುರ್ಗಪ್ಪ ಎಂಬ ಯುವಕ ವಾರಿಸುದಾರರು ಯಾರು ಇಲ್ಲದ ಕಾರಣ ಏನು ಮಾಡುವುದು ಎಂದು ತೋಚದೆ ಸಂಕಷ್ಟದಲ್ಲಿದ್ದಾಗ ಮಾಹಿತಿ ತಿಳಿದ ಸ್ಥಳೀಯ ಮುಖಂಡರು ಆಸ್ಪತ್ರೆಗೆ ತೆರಳಿ ಅಲ್ಲಿಂದ ಡಿ ಎಚ್ ಓ ರವರ ಬಳಿ ಫೋನ್ ಮೂಲಕ ಮಾತನಾಡಿ ಗಾಯಾಳುವನ್ನು 108 ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂಧರ್ಭದಲ್ಲಿ ನಗರಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ರಜಾಕ್,ಅರೋಗ್ಯ ಸಮಾಜ ಸೇವಾಸಕ್ತ ಸಿದ್ದೀಕ್ ಗೂನಡ್ಕ ಮತ್ತು ಸಿಬ್ಬಂದಿಗಳು ಸಹಕರಿಸಿದರು.