ಜ.4 ಮತ್ತು 5 : ರಂಗಮನೆಯಲ್ಲಿ ನೀನಾಸಂ ನಾಟಕೋತ್ಸವ

0

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ ಜನವರಿ 4 ಮತ್ತು 5 ರಂದು ಸಂಜೆ 6.45 ಕ್ಕೆ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.

ಜ.04 ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ ಹಾಗೂ ಜ.05 ರಂದು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ, ವಿದ್ಯಾನಿಧಿ ವನಾರಸ್ ನಿರ್ದೇಶಿಸಿದ ಅಂಕದ ಪರದೆ ನಾಟಕಗಳ ಪ್ರದರ್ಶನ ನಡೆಯಲಿದೆ.
ಎರಡೂ ನಾಟಕಗಳು ರಾಜ್ಯದಾದ್ಯಂತ ಬಹಳ ಪ್ರಸಿದ್ದಿ ಪಡೆದ ಪ್ರಯೋಗಗಳಾಗಿವೆ. ಎರಡೂ ನಾಟಕಗಳಲ್ಲಿ ಸುಳ್ಯ ರಂಗಮನೆಯ ಪ್ರತಿಭೆ, ನಟಿ ಮಮತಾ ಕಲ್ಮಕಾರು ಇವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ನಾಟಕವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷರಾದ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.