ನಾಲ್ಕೂರು: ಚತ್ರಪ್ಪಾಡಿ ಕುಟುಂಬದ ಧರ್ಮದೈವದ ನೇಮ

0


ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಕುಟುಂಬಸ್ಥರ ಧರ್ಮದೈವ, ಸಹ ಪರಿವಾರ ದೈವಗಳ ನೇಮೋತ್ಸವ ಡಿ. ೨೧ ರಿಂದ ೨೨ರ ವರಗೆ ನಡೆಯಿತು. ೨೧ರಂದು ಸಂಜೆ ದೈವಗಳ ಭಂಡಾರ ತೆಗೆದು ನಂತರ ಕ್ರಮವಾಗಿ ದೇವತೆ, ಪಾಷಣ ಮೂರ್ತಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವದ ನೇಮ ನಡೆದು, ೨೨ರಂದು ಧರ್ಮ ದೈವ ರುದ್ರ ಚಾಮುಂಡಿ, ಮಂತ್ರವಾದಿ ಗುಳಿಗ ದೈವದ ನೇಮ ನಡೆದು, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ರಾಜಗುಳಿಗ ಅಂಗಾರ ದೈವದ ನೇಮ ನಡೆಯಿತು.


ಈ ಸಂದರ್ಭದಲ್ಲಿ ಆದಿಮನೆಯ ಯಜಮಾನಿ ಶ್ರೀಮತಿ ಭಾಗೀಶ್ವರಿ ಚತ್ರಪ್ಪಾಡಿ, ಕುಟುಂಬದ ಯಜಮಾನ ಮೋನಪ್ಪ ಗೌಡ ಕಮಿಲ ಮುಳಬಾಗಿಲು ಸೇರಿದಂತೆ ಬಂಧು ಮಿತ್ರರು ಉಪಸಿತರಿದ್ದರು. ವರದಿ :ಡಿ.ಹೆಚ್