ಮಧ್ಯಾಹ್ನದ ತನಕ ಶೇ. 76 ಮತದಾನ
ಸಾಲಗಾರರಲ್ಲದ ಕ್ಷೇತ್ರ ಶೇ.68 – ಸಾಲಗಾರರ ಸಾಮಾನ್ಯ ಕ್ಷೇತ್ರ ಶೇ.78.61
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಆಡಳಿತ ಮಂಡಳಿಯ ಚುನಾವಣೆಯು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಶೇ. 76ರಷ್ಟು ಮತದಾನವಾಗಿದೆ.
ಇಲ್ಲಿ ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 307 ಮಂದಿ ಮತದಾರರಿದ್ದು, ಮಧ್ಯಾಹ್ನದ ವೇಳೆಗೆ 210 ಮಂದಿ ಸದಸ್ಯರು ಮತ ಚಲಾಯಿಸಿದ್ದು ಶೇ. 68 ಮತದಾನವಾಗಿದೆ. ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ,795 ಮಂದಿ ಮತದಾರರಿದ್ದು, ಇದರಲ್ಲಿ ಮಧ್ಯಾಹ್ನ ವೇಳೆಗೆ 625 ಮಂದಿ ಮತ ಚಲಾಯಿಸಿದ್ದು ಶೇ.78.61 ಮತದಾನವಾಗಿದೆ.
ಒಟ್ಟು 29 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಸಂಜೆ ಮತದಾನ ಮುಗಿದ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ.