ಮಗುವನ್ನು ಪೋಷಕರಿಗೊಪ್ಪಿಸಿದ ಸುಳ್ಯ ಪೊಲೀಸರು
ಪೋಷಕರಿಂದ ತಪ್ಪಿಸಿಕೊಂಡ
ಪುಟ್ಟ ಮಗುವಿನ ವಾರಸುದಾರರನ್ನು ಪತ್ತೆ ಹಚ್ಚಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಯಿತು.
ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಸುಳ್ಯ ಪೋಲಿಸ್ ಠಾಣೆಗೆ ತಂದೊಪ್ಪಿಸಲಾಗಿತ್ತು.
ಈ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಬಂದ ಗಂಟೆಯೊಳಗೆ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಪೋಲಿಸರು ಠಾಣೆಗೆಬರಮಾಡಿಸಿಕೊಂಡು ಮಗುವನ್ನು ಅವರಿಗೆ ಒಪ್ಪಿಸಿದ್ದಾರೆ. ಪತ್ತೆ ಹಚ್ಚಲು ಪೋಲಿಸರೊಂದಿಗೆ ಸಮಾಜ ಸೇವಕ ಗೋಕುಲ್ ದಾಸ್ ಮತ್ತು ಬಳ್ಳಾರಿ ಮಂಜು ಮೇಸ್ತ್ರಿಯವರು ಸಹಕರಿಸಿದರು.