ಜಿಲ್ಲಾ ಮಟ್ಟದ ಚಿತ್ರಕಲಾ ಸ್ವರ್ಧೆಯಲ್ಲಿ ತ್ರಯಾಕ್ಷಾಳಿಗೆ ದ್ವಿತೀಯ ಸ್ಥಾನ

0


ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ಇವರ ವನ್ಯಜೀವಿ ಸಪ್ತಾಹ -2024 ರ ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ – ವನ್ಯ ಚಿತ್ತಾರ ಕಿರಿಯ ವಿಭಾಗದಲ್ಲಿ ಭಾಗವಹಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ಈಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಕಚೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಸುಳ್ಯ ಮ್ಯಾನೇಜರ್ ಆಗಿರುವ ನೇಮಿಚಂದ್ರ ಮತ್ತು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಹ ಶಿಕ್ಷಕಿ ದಿವ್ಯನೇಮಿಚಂದ್ರ ಅವರ
ಸುಪುತ್ರಿ. ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎರಡನೇ ತರಗತಿಯ ವಿದ್ಯಾರ್ಥಿ.