ಮಡಪ್ಪಾಡಿ ಸೊಸೈಟಿ ಚುನಾವಣೆ

0

12 ಸ್ಥಾನಕ್ಕೆ ಒಟ್ಟು 25 ನಾಮಪತ್ರ ಸಲ್ಲಿಕೆ , ಒಂದು ಹಿಂತೆಗೆತ , ಅಂತಿಮ ಕಣದಲ್ಲಿ 24 ಅಭ್ಯರ್ಥಿಗಳು

ಡಿ. 29ರಂದು ಚುನಾವಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧೨ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಒಟ್ಟು ೨೫ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮ ಕಣದಲ್ಲಿ ೨೪ ಅಭ್ಯರ್ಥಿಗಳಿದ್ದಾರೆ. ಡಿ. ೨೯ರಂದು ಚುನಾವಣೆ ನಡೆಯಲಿದೆ.
ಸಾಮಾನ್ಯ ೬ ಸ್ಥಾನಕ್ಕೆ ೧೩ ಮಂದಿ ನಾಮಪತ್ರ ಸಲ್ಲಿಸಿದ್ದು, ಸಹಕಾರ ಬಳಗದಿಂದ ಪಿ.ಸಿ.ಜಯರಾಮ, ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಕುಸುಮಾಧರ ಕುತ್ಯಾಳ, ಸುನಿಲ್ ಕಡ್ಯ, ಚಂದ್ರಶೇಖರ ಗುಡ್ಡೆ ನಾಮಪತ್ರ ಸಲ್ಲಿಸಿದ್ದಾರೆ.


ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಎನ್.ಟಿ.ಹೊನ್ನಪ್ಪ, ವಿನಯಕುಮಾರ ಮುಳುಗಾಡು, ಕರುಣಾಕರ ಪಾರೆಪ್ಪಾಡಿ, ಆನಂದ ಅಂಬೆಕಲ್ಲು, ವಸಂತ ಕುಮಾರ್ ಹಾಡಿಕಲ್ಲು, ಆನಂದ ಕಡ್ಯ, ನಾಮಪತ್ರ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ೧ ಸ್ಥಾನಕ್ಕೆ ಸಹಕಾರ ಬಳಗದಿಂದ ಭವ್ಯ ಮಂಜುನಾಥ ಚಿರೆಕಲ್ಲು ಮತ್ತು ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಶಿವರಾಮ ಆಚಾರಿ ಚಿರೆಕಲ್ಲು ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ೧ ಸ್ಥಾನಕ್ಕೆ ಸಹಕಾರ ಬಳಗದಿಂದ ಅಜಯ್ ವಾಲ್ತಾಜೆ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸಚಿನ್ ಬಳ್ಳಡ್ಕ ನಾಮಪತ್ರ ಸಲ್ಲಿಸಿದ್ದಾರೆ.
ಅನುಸೂಚಿತ ಪಂಗಡ ಮೀಸಲು ೧ ಸ್ಥಾನಕ್ಕೆ ಸಹಕಾರ ಬಳಗದಿಂದ ಪೇರಪ್ಪ ಮಲೆ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಪ್ರದೀಪ್ ಕುಮಾರ್ ಪನಿಯಾಲ ನಾಮಪತ್ರ ಸಲ್ಲಿಸಿದ್ದಾರೆ.
ಅನುಸೂಚಿತ ಜಾತಿ ಮೀಸಲು ೧ ಸ್ಥಾನಕ್ಕೆ ಸಹಕಾರ ಬಳಗದಿಂದ ಶೇಖರ ಕೆ.ಪಿ. ಕಜೆ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಆನಂದ ಶೆಟ್ಟಿಮಜಲು ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳಾ ೨ ಸ್ಥಾನಕ್ಕೆ ಸಹಕಾರ ಬಳಗದಿಂದ ಶ್ರೀಮತಿ ಪ್ರವೀಣ ಯತೀಂದ್ರನಾಥ ಪಾಲ್ತಾಡು, ವಸಂತಿ ಕೊಡಪಾಲ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಚಂದ್ರಮತಿ ಪೂಂಬಾಡಿ, ಶಕುಂತಳ ಕೇವಳ ನಾಮಪತ್ರ ಸಲ್ಲಿಸಿದ್ದಾರೆ.
ಒಬ್ಬರು ನಾಮಪತ್ರ ಹಿಂಪಡೆತ
ಸಾಮಾನು ಕ್ಷೇತ್ರಕ್ಕೆ ಸಲ್ಲಿಸಿದ್ದ ಧನ್ಯಕುಮಾರ್ ದೇರುಮಜಲುರವರು ತಮ್ಮ ನಾಮಪತ್ರವನ್ನು ಹಿಂಪಡೆದ್ದಾರೆ. ಅಂತಿಮ ಕಣದಲ್ಲಿರುವ ೨೪ ಅಭ್ಯರ್ಥಿಗಳಿಗೆ ನೇರ ಸ್ಪರ್ಧೆ ನಡೆಯಲಿದೆ.