ಸ್ಕೂಟಿ ಸವಾರ ಮೃತ್ಯು – ಮಹಿಳೆಗೆ ಗಂಭೀರ
ಕಂಟೈನರ್ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಇಂದು ಸಂಪಾಜೆ ಬಳಿಯ ಚೆಡಾವಿನಲ್ಲಿ ಸಂಭವಿಸಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಪರಸ್ಪರ ಸಂಪಾಜೆಯ ಚೆಡಾವು ಬಳಿ ಡಿಕ್ಕಿಯಾಯಿತು. ಪರಿಣಾಮ ಓರ್ವ ಸ್ಕೂಟಿ ಸವಾರ ಮೃತಪಟ್ಟರು. ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿದೆ.
ಮೃತಪಟ್ಟವರು ಎಂ. ಚಿದಾನಂದ ಆಚಾರ್ಯ ಎಂದು ತಿಳಿದುಬಂದಿದೆ.