ಸುಳ್ಯ ತಾಲೂಕು ಪಂಚಾಯತ್ ಕೆ ಡಿ ಪಿ ನಾಮನಿರ್ದೇಶನ ಸದಸ್ಯರ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಸರಕಾರವು ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.

ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಇದರ ನಾಮ ನಿರ್ದೇಶನದ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯ ವಕೀಲರು ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಪಾಲ ಕೊಯಂಗಾಜೆ, ಐವರ್ನಾಡಿನ ಜಯಪ್ರಕಾಶ್ ನೇಕ್ರಪಾಡಿ, ಗುತ್ತಿಗಾರಿನ ಪರಮೇಶ್ವರ ಕೆಂಬಾರೆ, ಜಾಲ್ಸೂರಿನ ತೀರ್ಥರಾಮ ಬಾಳಜೆ, ಅರಂತೋಡಿನ ಆಶ್ರಫ್ ಗುಂಡಿ, ಬೆಳ್ಳಾರೆಯ ಶಕುಂತಳಾ ನಾಗರಾಜ್ ಇವರುಗಳು ಆಯ್ಕೆಗೊಂಡಿದ್ದಾರೆ.