ಗಾಂಧಿನಗರ ಕೆ.ಪಿ.ಎಸ್.ನಲ್ಲಿ ಗ್ರಾಹಕರ ದಿನಾಚರಣೆ

0

ವಿಶ್ವ ಗ್ರಾಹಕರ ದಿನದ ಅಂಗ ವಾಗಿ ಕರ್ನಾಟಕ ಪಬ್ಲಿಕ್ ಶಾಲೆ ಗಾಂಧಿನಗರ ಇಲ್ಲಿ ಡಿ.24ರಂದು ಗ್ರಾಹಕರ ದಿನಾಚರಣೆ ಯನ್ನು ಆಚರಿಸಲಾಯಿತು.

ಗ್ರಾಹಕ ಕ್ಲಬ್ ವತಿಯಿಂದ ಕಾರ್ಯಕ್ರಮ ವನ್ನು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್. ಡಿ . ಎಂ. ಸಿ ಉಪಾಧ್ಯಕ್ಷ, ಚಿದಾನಂದ ಕಾಯರ್ತೋ ಡಿ ಉದ್ಘಾಟನೆ ಮಾಡಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಹಾಗೂ ಪ್ರೌಢ ಶಾಲಾ ಶಿಕ್ಷಕರು ಗ್ರಾಹಕ ಮೇಳದಲ್ಲಿ, ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ನೀಡಿದರು.. ಗ್ರಾಹಕ ಕ್ಲಬ್ ನೋಡಲ್ ಅಧಿಕಾರಿ ಚಿನ್ನಪ್ಪ ಗೌಡ. ಯಂ. ಇವರು ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿ ಗಳು ಬಗೆ ಬಗೆ ಯ ಆಹಾರ ತಿನಿಸು ಗಳನ್ನು ತಯಾರಿಸಿ, ಮಾರಾಟ ಮಾಡಿ, ವ್ಯವಹಾರ ದ ಅನುಭವ ಪಡೆದರು. ಉತ್ತಮ ರುಚಿ ತಿನಿಸು, ಹಾಗೂ ಸ್ವಚ್ಛ ತೆ, ಹಾಗೂ ಲಾಭಾಂಶ ಆಧಾರದಲ್ಲಿ ಬಹುಮಾನ ನೀಡಲಾಯಿತು.