ಡಿ.31 ರಂದು ಕೆ.ಎಸ್.ಆರ್.ಟಿ.ಸಿ ಚಾಲಕ ಶಿವರಾಮ ಪಿ.ಎ. ಪಾಲೆಪ್ಪಾಡಿ ನಿವೃತ್ತಿ

0

ಕೆ.ಎಸ್.ಆರ್.ಟಿ.ಸಿ ಚಾಲಕರಾಗಿರುವ ಸಂಪಾಜೆ ಗ್ರಾಮದ ಪಾಲೆಪ್ಪಾಡಿ ಶಿವರಾಮ ರವರು ಡಿ.31 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

1989 ರಲ್ಲಿ ಬೆಳಗಾಂ ಕೇಂದ್ರೀಯ ವಿಭಾಗದಲ್ಲಿ ಚಾಲಕರಾಗಿ ಸೇರ್ಪಡೆಗೊಂಡು, 1990 ರಲ್ಲಿ ವರ್ಗಾವಣೆಯಾಗಿ ಹಾಸನ ತಾಲೂಕಿನ ಸಕಲೇಶಪುರ ಘಟಕಕ್ಕೆ ಸೇರ್ಪಡೆಗೊಂಡು, 1992 ನೇ ಇಸವಿಯಲ್ಲಿ ಪುತ್ತೂರು ಘಟಕಕ್ಕೆ ವರ್ಗಾವಣೆಯಾಗಿ 2017 ರಲ್ಲಿ ಸುಳ್ಯ ಘಟಕಕ್ಕೆ ಸೇರ್ಪಡೆಯಾದರು.
ಇವರಿಗೆ 5 ವರ್ಷಗಳ ಅಪಘಾತ ರಹಿತ ಸೇವೆಯನ್ನು ಪರಿಗಣಿಸಿ 26.1.2000 ದಲ್ಲಿ ಬೆಳ್ಳಿಪದಕವನ್ನು ನೀಡಿ ಗೌರವಿಸಲಾಗಿದೆ. ಹಾಗೂ ಇವರ 15 ವರ್ಷಗಳ ಅಪಘಾತ ರಹಿತ ಮೋಟಾರು ವಾಹನಾ ಚಾಲನಾ ಸೇವೆಯನ್ನು ಗುರುತಿಸಿ 2017 ರಲ್ಲಿ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.

ಇವರ ಪತ್ನಿ ಸುಶೀಲ ಗೃಹಿಣಿಯಾಗಿದ್ದು, ಪುತ್ರ ವಚನ್ ಡಿಪ್ಲೊಮಾ ಮಾಡಿ ಉದ್ಯೋಗದಲ್ಲಿದ್ದಾರೆ. ಪುತ್ರಿ ಹೇಮಾಶ್ರೀ B.sc ಮಾಡಿದ್ದಾರೆ.