ಪೆಟ್ರೋಲ್ ಬಂಕ್‌ನಿಂದ ಕಾರಿಗೆ ಡೀಸೆಲ್ ಹಾಕಿಸಿ ಹಣ ಪಾವತಿಸದೆ ಪರಾರಿಯಾದ ಚಾಲಕ

0

ಕಾರಿನ ಸಿಸಿ ಟಿವಿ ಫೂಟೇಜ್ ಪಡೆದು ಸುಳ್ಯ ಠಾಣೆಯಲ್ಲಿ ದೂರು

ಸುಳ್ಯ ಪೈಚಾರಿನ ಪೆಟ್ರೋಲ್ ಬಂಕ್ ನಿಂದ ಕಾರಿಗೆ ಡೀಸೆಲ್ ತುಂಬಿಸಿ ಹಣ ಪಾವತಿಸದೆ ಚಾಲಕ ಪರಾರಿಯಾಗಿರುವ ಘಟನೆ ಡಿ. ೨೫ ರಂದು ಬೆಳಗ್ಗೆ ನಡೆದಿದೆ.

ಸುಳ್ಯ ಕಡೆಯಿಂದ ಬಂದ ಮಹೇಂದ್ರ ಕಂಪನಿಯ ಕಾರೊಂದು ಪೈಚಾರು ಪೆಟ್ರೋಲ್ ಬಂಕ್ ಗೆ ಬಂದು ಸುಮಾರು ೫ ಸಾವಿರ ರೂ. ಮೊತ್ತದ ೬೫ ಲೀಟರ್ ಡೀಸೆಲ್ ತುಂಬಿಸಿದ್ದರು.

ಮತ್ತೆ ಸಿಬ್ಬಂದಿ ಕೈಗೆ ಒಂದು ಖಾಲಿ ಬಾಟಲಿ ನೀಡಿ ಅದರಲ್ಲಿ ೨ ಲೀಟರ್ ಪೆಟ್ರೋಲ್ ತುಂಬಿಸುವಂತೆ ಹೇಳಿದಾಗ ಬಂಕ್ ನ ಸಿಬ್ಬಂದಿ ಪೆಟ್ರೋಲ್ ತುಂಬಿಸಲು ಮುಂದಾಗುತ್ತಿದ್ದಂತೆ ವೇಗವಾಗಿ ಕಾರು ಚಲಾಯಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಎನ್ನಲಾಗಿದೆ.
ಘಟನೆಯ ಬಳಿಕ ಪೆಟೋಲ್ ಬಂಕ್ ನವರು ಸಿ ಸಿ ಟಿ ವಿಯಲ್ಲಿ ಪರಿಶೀಲನೆ ನಡೆಸಿದ್ದು ಕಾರು ಬೆಂಗಳೂರು ರಿಜಿಸ್ಟ್ರೇಷನ್ ಆಗಿದ್ದು ಬಳಿಕ ಇದರ ಬಗ್ಗೆ ಮಾಹಿತಿ ಪಡೆದಾಗ ಅದು ಫೇಕ್ ನಂ. ಪ್ಲೇಟ್ ಎಂದು ಕೂಡ ತಿಳಿಯಲಾಗಿದೆ.
ಈ ಬಗ್ಗೆ ಬಂಕ್ ನವರು ಸುಳ್ಯಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.