ಸುಳ್ಯ ತಾಲೂಕು ಯಾದವ ಸಮಾವೇಶ 2024

0

ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರಿಗೆ ಸನ್ಮಾನ

ಸಾಧಕರಿಗೆ ಸನ್ಮಾನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಯಾದವ ಸಭಾ ಕರ್ನಾಟಕ, ಕೇಂದ್ರ ಸಮಿತಿ ಮಂಗಳೂರು, ಸುಳ್ಯ ತಾಲೂಕು ವತಿಯಿಂದ ಯಾದವ ಸಮಾವೇಶ -2024 , ಶ್ರೀ ಸತ್ಯನಾರಾಯಣ ಪೂಜೆ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಭ್ರಮವು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಡಿ‌.25ರಂದು ಜರುಗಿತು.

ಬೆಳಿಗ್ಗೆ ಯಾದವ ಸಮುದಾಯ ಬಾಂಧವರ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ , ಪ್ರಸಾದ ವಿತರಣೆ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಅವರು ಉದ್ಘಾಟಿಸಿ, ಮಾತನಾಡಿ ಪ್ರಾದೇಶಿಕ ಸಮಿತಿಯವರು ಮಾಡುವ ಕೆಲಸಗಳಿಂದ ತಾಲೂಕು ಮತ್ತು ಜಿಲ್ಲಾ ಸಮಿತಿಗೆ ಬಲ ಬರುತ್ತದೆ. ಸಂಘಟನೆ ಬೆಳೆದಾಗ ಸಮುದಾಯದ ಅಭಿವೃದ್ಧಿಯಾಗಲು ಸಾಧ್ಯವಿದೆ. ಸಮುದಾಯದವರಿಗೆ ಪ್ರವರ್ಗ 1ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದ್ದು, ಚುನಾವಣೆಗೆ ನಿಂತ ಸಮುದಾಯದವರನ್ನು ಪಕ್ಷಭೇಧ ಮರೆತು ಗೆಲ್ಲಿಸಬೇಕು ಎಂದು ವಿನಂತಿಸಿದರು.

.
ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರು ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಯಾದವ ಸಮುದಾಯ ಇಂದು ಸಮಾಜದ ಮುನ್ನಲೆಗೆ ಬಂದಿದ್ದು, ಸಮುದಾಯದ ಮಕ್ಕಳಿಗೆ ಉತ್ತೇಜನ ಕೊಡುವ ಮೂಲಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಾಗಿದೆ ಎಂದರು.
ಸಮುದಾಯದ ಯುವಕರನ್ನು, ಮಹಿಳೆಯರನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸೋಣ ಎಂದು ಹೇಳಿದರು.

ಸನ್ಮಾನ – ಗೌರವ
ಕಾರ್ಯಕ್ರಮದಲ್ಲಿ ಪದ್ಮಶ್ರೀ
ಪುರಸ್ಕೃತ ಸತ್ಯನಾರಾಯಣ ಬೆಳೇರಿ ಹಾಗೂ ಸುಳ್ಯ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರುಗಳಾದ ಲೆಪ್ಟಿನೆಂಟ್ ಕರ್ನಲ್ ಡಾ. ಕಾರ್ತಿಕ್ ಕಣಕ್ಕೂರು, ಶ್ರೀಮತಿ ಸಂಧ್ಯಾ ಮಂಡೆಕೋಲು , ಪುಟಾಣಿ ಬೇಬಿ ಸಮೃದ್ಧಿ ಗೂನಡ್ಕ, ಕ್ರೀಡಾಪಟು ಲಕ್ಷ್ಮಣ ಬೊಳ್ಳಾಜೆ, ಕು. ಇಂಚರ ಆಲೆಟ್ಟಿ, ಶ್ರೇಯಸ್ ಹಳೆಗೇಟು, ಕು. ಮೇಘಕೃಷ್ಣ ಕಾಯರ್ತೋಡಿ, ಕು. ಲಾವಣ್ಯ ಅಜ್ಜಾವರ, ಕು. ಅರ್ಚನ ಅವರನ್ನು ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು .

ಬಳಿಕ ಮಾತನಾಡಿದ ಸತ್ಯನಾರಾಯಣ ಬೆಳೇರಿ ಅವರು ಈ ಭಾಗದಲ್ಲಿ ಯಾದವ ಸಮುದಾಯ ಅತ್ಯಂತ ಗಟ್ಟಿಯಾಗಿ ಬೆಳೆದಿದೆ. ಸಮುದಾಯ ಬಾಂಧವರು ಸಾಧನೆ ಮಾಡಿದಾಗ ಸಮುದಾಯ ಗಟ್ಟಿಗೊಳ್ಳುತ್ತದೆ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಯಾದವ ಸಭಾ ಸಲಹಾ ಮಂಡಳಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಯಾದವಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ವಿ.ವಿ. ಬಾಲನ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕೇಂದ್ರ ಸಮಿತಿ ಕೋಶಾಧಿಕಾರಿ ಚಂದ್ರಶೇಖರ ಅಳಿಕೆ, ಯಾದವ ಸಭಾ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣ ಪಡೀಲ್, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಮೈ, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪಾಣಾಜೆ, ರಾಮಚಂದ್ರ ಕೇನಾಜೆ, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ದಾಮೋದರ ಕೇನಾಜೆ, ಉಪಾಧ್ಯಕ್ಷರುಗಳಾದ ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಬಾಲಕೃಷ್ಣ ಅಡ್ಡಬೈಲು, ಜೊತೆ ಕಾರ್ಯದರ್ಶಿ ಅಚ್ಚುತ ಸುಬ್ರಹ್ಮಣ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಉಪಸ್ಥಿತರಿದ್ದರು. ಯಾದವ ಸಭಾ ಸುಳ್ಯ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಬೆಟ್ಟ ಸ್ವಾಗತಿಸಿದರು. ಯುವವೇದಿಕೆ ಕಾರ್ಯದರ್ಶಿ ತಿರ್ಥೇಶ್ ದುಗ್ಗಲಡ್ಕ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಭಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಪದವೀಧರ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಸನ್ಮಾನ, ಜರುಗಿತು ‌