ರೋಟರಿ ವಿದ್ಯಾಸಂಸ್ಥೆಯಲ್ಲಿ ಮನರಂಜಿಸಿದ ಶಾಲಾ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

0

ಡಿಸೆಂಬರ್ 21 ರಂದು ರೋಟರಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ.ಯಶವಂತ ರೈ. ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ, ಉಪನ್ಯಾಸ ನೀಡಿದರು.
ರೋಟರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊ. ಯೋಗಿತಾ ಗೋಪಿನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು.


ಶಾಲಾ ಸಂಚಾಲಕರಾದ ರೊ.ಪಿ.ಪಿ.ಪಿಹೆಚ್ಎಫ್ ರೊ. ಪ್ರಭಾಕರನ್ ನಾಯರ್ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರೆ , ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಾರ್ಷಿಕ ವರದಿ ವಾಚಿಸಿದರು.

ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ, ಕರ್ನಾಟಕ ರೈಟ್ಸ್ ಇವರಿಂದ ಕೊಡಲ್ಪಡುವ 2024ನೇ ಸಾಲಿನ ರಾಜ್ಯ ಮಟ್ಟದ ಬೆಸ್ಟ್ ಮ್ಯಾನೇಜ್ ಮೆಂಟಲ್ ಅವಾರ್ಡ್ ಪುರಸ್ಕೃತರಾದ, ಹಲವು ಪ್ರಶಸ್ತಿಗಳ ಸರದಾರ , ಪ್ರಸ್ತುತ ರೋಟರಿ ಆಡಳಿತ ಮಂಡಳಿಯ ಸದಸ್ಯರಾದ ರೊ. ಸೀತಾರಾಮ ರೈ, ಸವಣೂರು , ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಸಮಾರಂಭದ ಮುಖ್ಯ ಅತಿಥಿಗಳಾದ ಯಶವಂತ ರೈ ಇವರನ್ನು ಸನ್ಮಾನಿಸಲಾಯಿತು.

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆ ಕು.ಕ್ಷಮಾ, ಎಸ್.ಎಸ್.ಎಲ್.ಸಿಯಲ್ಲಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಣಮ್ಯ. ಎನ್.ಆಳ್ವ, ನಿಖಿತಾ, ಪೃಥ್ವಿರಾಜ್, ಯಶಸ್ವಿ ಪಿ. ಭಟ್, ಗೌರವ್ ನಿಡ್ಯಮಲೆ, ರಮ್ಯ ಪಾರ್ವತಿ, ರಾಜ್ಯ ಮಟ್ಟದ ಕಲೋತ್ಸವದ ಮೃದಂಗ ವಾದನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಕ್ಷಿತೀಶರಾಮ, ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.
ಶಾಲಾ ಕ್ರಿಡೋತ್ಸವದಂದು ಪೋಷಕರಿಗೆ ಹಮ್ಮಿಕೊಂಡ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರೊ.ಮಧುಸೂದನ್ ಹಾಗೂ ರೋ.ಲತಾ ಮಧುಸೂದನ್ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಬಳಿಕ ಶಾಲೆಯಲ್ಲಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯನ್ನು ಸುಂದರವಾಗಿ ಅಲಂಕರಿಸಿದ ವಿದ್ಯಾ ಸಂಸ್ಥೆಯ ಕಲಾಶಿಕ್ಷರಾದ ಶ್ರೀಹರಿ ಪೈಂದೋಡಿ ಹಾಗೂ ಪದ್ಮನಾಭ ಕೊಯಿನಾಡು ಇವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರಾದ ರೊ.ದಯಾನಂದ ಆಳ್ವ, ರೊ. ಮಧುಸೂದನ್, ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಭುವನೇಶ್, ಪ್ರವೀಣ್, ಶ್ರೀಮತಿ ನಳಿನಿ ಕುಂಜತ್ತಾಯ, ಶ್ರೀಮತಿ ಶೀಲಾವತಿ, ಶ್ರೀಮತಿ ತೇಜಸ್ವಿನಿ, ಶ್ರೀಮತಿ ವಿದ್ಯಾ ಬೇರಿಕೆ, ಸುಬೋಧ್ ಶೆಟ್ಟಿ, ಸಿ.ಪಿ.ಎಲ್ ಖುಷಿ.ಪಿ., ಎಸ್.ಪಿ.ಎಲ್, ಕ್ಷಿತೀಶ ರಾಮ, ಚಿನ್ಮಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕು.ಯಶಸ್ವಿ.ಪಿ.ಭಟ್, ಭಾನವಿ ಕೊಯಿಂಗಾಜೆ, ಹಾಗೂ ಶ್ರೇಯಾ ಸರಸ್ವತಿ
ಪ್ರಾರ್ಥಿಸಿದರು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಅಂಬೆ ಕಲ್ಲು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿನಿಯರಾದ ಹಿಮಾನಿ ಎಂ.ಎಸ್, ಯಶಸ್ವಿ ಪಿ.ಭಟ್, ಶಿಕ್ಷಕಿಯರಾದ ರಮ್ಯಾ ಅಡ್ಯಾರ್ ಹಾಗೂ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.