ಚೆನ್ನಕೇಶವ ದೇವರ ಜಾತ್ರೋತ್ಸವದ ಪೂರ್ವಭಾವಿಯಾಗಿ ದೇವಳದ ಒಳಾಂಗಣ ಸ್ವಚ್ಚತಾ ಕಾರ್ಯ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪೂರ್ವ ಭಾವಿಯಾಗಿ ದೇವಳದ ಒಳಾಂಗಣದ ಸ್ವಚ್ಚತಾ ಕಾರ್ಯವನ್ನು ಬೂಡು ಭಗವತಿ ಯುವ ಸೇವಾ ಸಂಘದ ಸದಸ್ಯರು ಹಮ್ಮಿಕೊಂಡರು. ದೇವಳದಒಳಾಂಗಣವನ್ನು ನೀರು ಹಾಕಿ ತೊಳೆದು ಶುಚಿಗೊಳಿಸಲಾಯಿತು.

ಬೂಡು ರಾಧಾಕೃಷ್ಣ ರೈ ಮತ್ತು ಸುನಿಲ್ ಕೇರ್ಪಳ ರವರ ನೇತೃತ್ವದಲ್ಲಿ ಭಗವತಿ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡರು.