ಸುಳ್ಯದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ

0

ಕೃಷಿ ಇಲಾಖೆ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಕಂಪೆನಿ ಸುಳ್ಯ ನಿಯಮಿತ, ತಾಲೂಕು ಪಂಚಾಯತ್ ಸುಳ್ಯ ,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಕೆ.ಎಸ್.ಆರ್.ಎಲ್ ಪಿ.ಯಸ್ ,ಜಿಲ್ಲಾ ಪಂಚಾಯತ್ ಮಂಗಳೂರು, ಸಂಜೀವಿನಿ ಒಕ್ಕೂಟ ಸುಳ್ಯ ಇವರುಗಳ ಸಹಯೋಗದಲ್ಲಿ ಎ.ಪಿ.ಎಂ.ಸಿ ಕಟ್ಟಡ ದಲ್ಲಿ ಡಿ. 23 ರಂದು ರೈತ ದಿನಾಚರಣೆ ಕಾರ್ಯಕ್ರಮ ನಡೆಯಿತು.

ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ದೇರಣ್ಣ ಗೌಡ ( ತಾಲೂಕು ಅಧ್ಯಕ್ಷರು ಕೃಷಿಕ ಸಮಾಜ ಸುಳ್ಯ), ಲೋಲಾಜಾಕ್ಷ ( ಅಧ್ಯಕ್ಷರು , ರೈತ ಸಂಘ ಸುಳ್ಯ) ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ,ಶ್ರೀಮತಿ ಸುಹಾನ ( ತೋಟಗಾರಿಕಾ ಇಲಾಖೆ ಸುಳ್ಯ), ವೀರಪ್ಪ ಗೌಡ ( ಅಧ್ಯಕ್ಷರು, ರೈತ ಉತ್ಪಾದಕರ ಕಂಪೆನಿ ಸುಳ್ಯ ), ಟಿ. ಜೇ ರಮೇಶ್ ( ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು), ಹರೀಶ್ ಶೆಣೈ ( ವಿಜ್ಞಾನಿಗಳು ಬೇಸಾಯ ಶಾಸ್ತ್ರ ಮತ್ತು ನೈಸರ್ಗಿಕ ಕೃಷಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು) ಮಲ್ಲಿಕಾರ್ಜುನ ( ವಿಜ್ಞಾನಿ ಮಣ್ಣು ಶಾಸ್ತ್ರ,
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ) ಶ್ರೀಮತಿ ಶ್ವೇತ (ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್, ಆರ್, ಎಲ್,ಎಂ ತಾಲೂಕು ಪಂಚಾಯತ್ ಸುಳ್ಯ) , ಇವರುಗಳು ಉಪಸ್ಥಿತರಿದ್ದರು.

ಸುಳ್ಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇರಣ್ಣ ಗೌಡ ತಾಲೂಕು ಅಧ್ಯಕ್ಷರು ಕೃಷಿಕ ಸಮಾಜ ಸುಳ್ಯ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕೃಷಿಕ ಸಮಾಜ ಸುಳ್ಯ ಇದರ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಸಮಗ್ರ ಕೃಷಿಕರೆಂದು ಗುರುತಿಸಿ ಐವರ್ನಾಡು ಗ್ರಾಮ ಪಂಚಾಯತ್ ನವೀನ್ ಚಂದ್ರ ಚಾತುಬಾಯಿ,ಪ್ರಗತಿಪರ ಕೃಷಿಕ ರಾಗಿ ನೆಲ್ಲೂರು ಕೆಮ್ರಜೆ ಮಹೇಶ್ ಗಟ್ಟಿಗಾರು ,ಸಂಪಾಜೆ ಗ್ರಾಮ ಪಂಚಾಯತ್ ವಿಜಯ್ ಕುಮಾರ್ ಕುಯಿಂತೋಡು ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು ಅಧ್ಯಕ್ಷರು ರೈತ ಸಂಘ ಸುಳ್ಯ ಇವರು ರೈತರ ಪರವಾಗಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಪರಿಶಿಷ್ಟ ಜಾತಿ ಅರ್ಹ ರೈತ ಫಲಾನುಭವಿಗಳಿಗೆ ಗೊಬ್ಬರ,ಡ್ರಮ್ ಮತ್ತು ಎರೆಹುಳು ತೊಟ್ಟಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಕು. ನಂದಿತಾ ಬಿ. ಟಿ.ಎಂ ಕೃಷಿ ಇಲಾಖೆ ಸುಳ್ಯ ಇವರು ಕಾರ್ಯಕ್ರಮ ನಿರೂಪಿಸಿದರು.
ಕು.ಸ್ಮಿತಾ ಎ. ಟಿ.ಎಂ ಕೃಷಿ ಇಲಾಖೆ ಪಂಜ ವಲಯ ಇವರು ಸನ್ಮಾನ ಸ್ವೀಕರಿಸಿದ ಅತಿಥಿಗಳ ಕಿರು ಪರಿಚಯ ಮಾಡಿದರು. ಉಪಸ್ಥಿತಿಯಲ್ಲಿದ್ದ ಅತಿಥಿಗಳಿಗೆ ಅರಣ್ಯ ಇಲಾಖೆ ಯ ಮಾವಿನ ಗಿಡಗಳನ್ನು ವಿತರಿಸಲಾಯಿತು. ಶ್ರೀಮತಿ ಮೋಹಿನಿ ಕೃಷಿ ಸಖಿ ಸಂಪಾಜೆ ಇವರು ಧನ್ಯವಾದ ತಿಳಿಸಿದರು. ಎಸ್.ಸಿ. ರೈತ ಫಲಾನುಭವಿಗಳು,ಕೃಷಿಕರು,
ಒಕ್ಕೂಟದ ಕೃಷಿ ಸಖಿಗಳೂ,ಇಲಾಖೆಯ ಸಿಬ್ಬಂದಿ ಗಳು,ರೈತ ಉತ್ಪಾದಕರ ಕಂಪೆನಿ ಯ ಸಿಬ್ಬಂದಿ ಗಳು, ಎ. ಪಿ.ಎಂ.ಸಿ ಸಿಬ್ಬಂದಿಗಳು ಹಾಜರಿದ್ದರು.