ಸನಾತನ ಸಂಸ್ಕೃತಿ ಭಾರತದ ತಾಯಿ ಬೇರು -ಮಾತಾನಂದಮಯಿ
ಮಕ್ಕಳನ್ನು ನೈಜ ಹಿಂದುವಾಗಿ ಬೆಳೆಸಿ -ಹಾರಿಕಾ ಮಂಜುನಾಥ್
ತ್ಯಾಗ, ಸೇವೆ ಭಾರತದ ಆದರ್ಶ. ಸನಾತನ ಸಂಸ್ಕೃತಿ ನಮ್ಮ ತಾಯಿ ಬೇರಾದರೆ, ಧರ್ಮವೆಂಬುದು ಕಾಂಡ. ಈ ಮೂಲಕ ಜೀವನ ವೃಕ್ಷ ಬೆಳೆಯುತ್ತದೆ. ನಮ್ಮತನ ಮರೆತರೆ ನಮಗೆ ಭವಿಷ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿಯವರು ನುಡಿದರು.

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಜ. ೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು





.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.





ಧಾರ್ಮಿಕ ಉಪನ್ಯಾಸ ನೀಡಿದ ವಾಗ್ಮಿ ಹಾರಿಕಾ ಮಂಜುನಾಥ್ ಅವರು, ಧರ್ಮಜಾಗೃತಿಯ ಮೂಲಕ ದೇಶದ ಜಾಗೃತಿಯಾಗಬೇಕು. ಕುಟುಂಬ ಮೌಲ್ಯಗಳ ಮೂಲಕ ಮನೆಯನ್ನು ಅಂತಹ ಮನೆಯ ಮೂಲಕ ಸಮಾಜವನ್ನು, ಅಂತಹ ಸಮಾಜದ ಮೂಲಕ ದೇಶವನ್ನು ಬದಲಾಯಿಸಲು ಸಾಧ್ಯವಿದೆ. ಮನೆಯ ಮಕ್ಕಳನ್ನು ನೈಜ ಹಿಂದೂವಾಗಿ ಬೆಳೆಸುವ ಮೂಲಕ ಜಾಗೃತಿಗೊಳಿಸಬೇಕು ಎಂದು ಹೇಳಿದರು, ಜಾತಿ, ತತ್ವ ಸಿದ್ಧಾಂತಗಳು ಮನೆಯೊಳಗಿರಲಿ. ಹೊರಗೆ ಬಂದಾಗ ಹಿಂದೂ ಮಾತ್ರ ಆಗಿರಲಿ ಎಂದ ಅವರು, ಧಾರ್ಮಿಕ ಶಿಕ್ಷಣದಿಂದ ಸಂಘಟಿತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞೆ ಡಾ.ಪದ್ಮಪ್ರಕಾಶ್, ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಇಂದಿರಾ ಬಿ.ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯ ಮೇಲ್ವಿಚಾರಕಿ ಶ್ರೀಮತಿ ಹೇಮಲತಾ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಕೆ.ಜಿ. ಕುಸುಮಾತಿ ರೈ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ದಿವ್ಯಾ ಯೋಗಾನಂದ, ಎಡಮಂಗಲ ಗ್ರಾ.ಪಂ. ಪಿ.ಡಿ.ಒ. ಶ್ರೀಮತಿ ಭವ್ಯಾ ಎಂ.ಬಿ. ಮುಖ್ಯ ಅತಿಥಿಗಳಾಗಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಭಾಗ್ಯಪ್ರಸನ್ನ ಎಣ್ಮೂರು, ಶ್ರೀಮತಿ ವಾರಿಜಾಕ್ಷಿ ಕೇರ್ಪಡ ಉಪಸ್ಥಿತರಿದ್ದರು.

ಅಂಬಾರಿ ಕ್ರಿಯೇಷನ್ ಮೂಲಕ ಕೆ.ಟಿ.ತಿಮ್ಮಪ್ಪ ಅವರು ನಿರ್ಮಿಸಿದ ಕೇರ್ಪಡದ ಅರಸಿ ಎಂಬ ತುಳು ಭಕ್ತಿಗೀತೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕು. ತೃಷಾ ಪ್ರಾರ್ಥಿಸಿದರು. ಶ್ರೀಮತಿ ಭಾಗ್ಯಪ್ರಸನ್ನ ಸ್ವಾಗತಿಸಿ, ಶ್ರೀಮತಿ ದಿವ್ಯಾ ಯೋಗಾನಂದ ವಂದಿಸಿದರು. ಶ್ರೀಮತಿ ಮಧು ಯತೀಶ್ ಕಾರ್ಯಕ್ರಮ ನಿರೂಪಿಸಿದರು.










