ಬಾಳಿಲ ವಿದ್ಯಾ ಬೋಧಿನಿ ಪ್ರೌಢ ಶಾಲೆಯಲ್ಲಿ ತರಬೇತಿ ಕಾರ್ಯಗಾರ

0

ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಇದರ ಆಶ್ರಯದಲ್ಲಿ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರ ‘ನಲಿವಿನ ಓದು ಗೆಲುವಿನ ಕಡೆಗೆ’ ಪರೀಕ್ಷಾ ಪೂರ್ವ ತಯಾರಿ ತರಬೇತಿ ಕಾರ್ಯಗಾರ ಜ.7 ರಂದು ಬಾಳಿಲ ವಿದ್ಯಾ ಬೋಧಿನಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೇಸಿ ಎಚ್ ಜೆ ಎಫ್ ವಾಚಣ್ಣ ಕೆರೆಮೂಲೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ . ವಿದ್ಯಾ ಬೋಧಿನಿ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ರಾಧಾಕೃಷ್ಣ ರಾವ್.ಯು, . ಮುಖ್ಯೋಪಾಧ್ಯಾಯ ಯಶೋಧರ.ಎನ್. ಉಪಸ್ಥಿತರಿದ್ದರು. ತರಬೇತುದಾರರಾಗಿ ಜೇಸಿಐ ವಲಯ ತರಬೇತುದಾರ ಜೆಎಫ್ಎಂ ಸೋಮಶೇಖರ ನೇರಳ ಹಾಗೂ ಕಾರ್ಯದರ್ಶಿ ಜೇಸಿ ಎಚ್ ಜಿ ಎಫ್ ಅಶ್ವಥ್ ಬಾಬ್ಲುಬೆಟ್ಟು,ಕಾರ್ಯಕ್ರಮ ನಿರ್ದೇಶಕ ಜೇಸಿ ಪ್ರಕಾಶ್ ಅಳ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿ ಕಿರಣ್ ಕಂರ್ಬು ನೆಕ್ಕಿಲ ವೇದಿಕೆಗೆ ಆಹ್ವಾನಿಸಿದರು.ಜೇಸಿ ವಾಣಿಯನ್ನು ಜೇಸಿ ಹರೀಶ್ ಮಾಳಪ್ಪಮಕ್ಕಿ ವಾಚಿಸಿದರು. ತರಬೇತಿದಾರರನ್ನು ಜೇಸಿ ಪ್ರವೀಣ್ ಕುಂಜತ್ತಾಡಿ ಪರಿಚಯಿಸಿದ್ದರು.ಜೇಸಿ ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಸುಮಾರು 60 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು.