ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

0

ಅಧ್ಯಕ್ಷರಾಗಿ ದಯಾನಂದ ಪುರ, ಉಪಾಧ್ಯಕ್ಷ ರಾಗಿ ಚೆನ್ನಕೇಶವ ದೋಳ ಅವಿರೋಧ ಆಯ್ಕೆ

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಸೊಸೈಟಿ ಸಭಾಂಗಣದಲ್ಲಿ ಚುನಾವಣೆ ನಡೆದು ನೂತನ ಅಧ್ಯಕ್ಷರಾಗಿ ದಯಾನಂದ ಪುರ, ಉಪಾಧ್ಯಕ್ಷರಾಗಿ ಚೆನ್ನಕೇಶವ ದೋಳ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇಬ್ಬರು ಅವಿರೋಧವಾಗಿ ಆಯ್ಕೆಯಾದರು.

ಡಿಸಿಸಿ ಬ್ಯಾಂಕ್‌ನ ಜಿಲ್ಲಾ ಪ್ರತಿನಿಧಿಯಾಗಿ ಮನೋಜ್ ಕುಮಾರ್ ಆಯ್ಕೆಯಾದರು.

ನಿರ್ದೇಶಕರುಗಳಾದ ಮಹಾಬಲ ಕಟ್ಟಕೋಡಿ, , ಲಿಂಗಪ್ಪ ನಾಯ್ಕ ತೋಟಚಾವಡಿ, ನವೀನ ದೊಡ್ಡಿಹಿತ್ಲು, ಮೋನಪ್ಪ ಪೂಜಾರಿ ಹೈದಂಗೂರು, ವೆಂಕಟ್ರಮಣ ಗೌಡ ಕೆ., ಅಚ್ಚುತ ಮಾಸ್ತರ್ ತೇರ್ಥಮಜಲು, ಸರಸ್ವತಿ ಕಕ್ಕಾಡು, ಅಕ್ಷತಾ ಕೆ.ಸಿ., ಲತಾಶ್ರೀ, ಅಣ್ಣು ಅಂಗಡಿಮಜಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚುನಾವಣಾಧಿಕಾರಿ ಬಿ. ನಾಗೇಂದ್ರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ಚುನಾವಣಾ ಅಧಿಕಾರಿ ನಾಗೇಂದ್ರರವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ವಂದಿಸಿದರು.