ಸುಳ್ಯದ ಮುಖ್ಯ ರಸ್ತೆಯಲ್ಲಿ ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಐರಾವತ ಬಸ್ಸು

0

ಸುಳ್ಯದ ಜ್ಯೋತಿ ಸರ್ಕಲ್ ಬಳಿಯಲ್ಲಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಐರಾವತ ಬಸ್ಸೊಂದು ಕೆಟ್ಟು ನಿಂತಿದೆ.

ಸಂಜೆ 3.00 ಗಂಟೆಗೆ ಕೆಟ್ಟು ನಿಂತ ಬಸ್ಸನ್ನು ಮಂಗಳೂರಿನಿಂದ ಮೆಕ್ಯಾನಿಕ್ ಬಂದು ದುರಸ್ತಿ ಪಡಿಸಬೇಕಾದ್ದುದರಿಂದ ತಡ ರಾತ್ರಿಯ ತನಕ ಬಸ್ಸು ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ಬಸ್ಸಿನಲ್ಲಿ ಪ್ರಯಾಣಿಕರಿದ್ದು ಅವರನ್ನು ‌ಮಂಗಳೂರಿನಿಂದ ಬರುತ್ತಿದ್ದ ಬಸ್ಸಿನಲ್ಲಿ ಕಳುಹಿಸಲಾಯಿತು.