ಗಡಿಗುರುತು ಹಾಗೂ ಜಂಟಿಸರ್ವೆಗೆ ಆಗ್ರಹ
ಸುಬ್ರಹ್ಮಣ್ಯ ದ
ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಗಡಿಗುರುತು ಹಾಗೂ ಜಂಟಿಸರ್ವೆ ಗೆ ಆಗ್ರಹಿಸಿ ರೈತರಿಂದ ಜ.8 ರಂದು ಪ್ರತಿಭಟನೆ ನಡೆಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿಯವರು ಈ ಬಗ್ಗೆ ಮಾತನಾಡಿ
ರೈತರ ಭೂಮಿ ಉಳಿಯಬೇಕು – ಕೃಷಿ ಉಳಿಯಬೇಕು ಎಂದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಜನವಸತಿ ಪ್ರದೇಶಗಳನ್ನು ಬಿಟ್ಟು ಗಡಿ ಗುರುತು ಮಾಡಿ ಅದರ 100 ಮೀ ಗಳ ಆಚೆಗೆ ಬಪರ್ ಝೋನ್ ಹಾಕಬೇಕು, ರೈತರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿಯನ್ನು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದ ಕಿಶೋರ್ ಶಿರಾಡಿಯವರು ನಂತರ ವಲಯ ಅರಣ್ಯಾಧಿಕಾರಿಗಳಿ ಗೆ ಈ ಬಗ್ಗೆ ಮನವಿ ಪತ್ರ ನೀಡಿ ಸರಕಾರಕ್ಕೆ ಮುಟ್ಟಿಸಿ ಶೀಘ್ರ ಕ್ರಮವಹಿಸುವಂತೆ ಕೋರಿದರು. ಮೀರಾ ಸಾಹೇಬ್, ಚಂದ್ರಶೇಖರ ಬಾಳುಗೋಡು ಸೇರಿದಂತೆ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.