ಸುಳ್ಯ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮನ್ ಭೇಟಿ

0

ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ; ವೈಶಾಲಿ ಕುಡ್ವ

ಸುಳ್ಯ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ಜ.9 ರಂದು ಭೇಟಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷೆ ಚಿಂತನ ಸುಬ್ರಹ್ಮಣ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ವೈಶಾಲಿ ಕುಡ್ವ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ನಮ್ಮ ಕ್ಲಬ್ ಈಗಾಗಲೇ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಆದರೆ ಎಲ್ಲಾ ಕೆಲಸಗಳನ್ನು ಶ್ರದ್ಧೆ ಹಾಗೂ ಪ್ರೀತಿಯಿಂದ ಮಾಡಬೇಕು ಆಗ ನಾವು ಮಾಡಿದ ಕೆಲಸಗಳಿಗೆ ಪ್ರತಿಫಲ ಸಿಗುತ್ತದೆ, ಜೊತೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ”
ಎಂದು ಕ್ಲಬ್‌ನ ಸದಸ್ಯರಿಗೆ ಕಿವಿ ಮಾತು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಕ್ಲಬ್ ವತಿಯಿಂದ ಹೊರ ತರಲಾದ “ಇನ್ನರ್ ಸ್ಪೂರ್ತಿ” ಸ್ಪೆಷಲ್ ಬುಲೆಟಿನ್‌ನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತ ಗೋಪಿನಾಥ್ ಬಿಡುಗಡೆಗೊಳಿಸಿದರು.ಹಾಗೂ ದುಗಲಡ್ಕ ಅಂಗನವಾಡಿ ಕೇಂದ್ರ, ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆ, ಅಜ್ಜಾವರ ಶಾಲೆ , ಕೋಲ್ಚಾರು ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಉಪಕರಣಗಳನ್ನು ಕ್ಲಬ್‌ನ ಮುಖಾಂತರ ಕೊಡುಗೆಯಾಗಿ ನೀಡಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಜಯ ಮಣಿ ಮಾಧವ, ಕ್ಲಬ್ ಕಾರ್ಯದರ್ಶಿ ಡಾ.ಸವಿತಾ ಹೊದ್ದೆಟ್ಟಿ, ಖಜಾಂಜಿ ಡಾ| ಸ್ಮಿತಾ ಹರ್ಷವರ್ಧನ್, ಐಎಸ್‌ಒ ಸೌಮ್ಯ ರವಿಪ್ರಸಾದ್ , ಸಂಪಾದಕಿ ಪೂಜಾ ಸಂತೋಷ್, ವೆಬ್ ಕೋರ್ಡಿನೇಟರ್ ಡಾ.ಪ್ರಜ್ಞಾ ಎಂ.ಆರ್. , ಐಪಿಪಿ ಸವಿತಾ ನಾರ್ಕೋಡು, ಜೊತೆ ಕಾರ್ಯದರ್ಶಿ ಮೀರಾ ಎಂ. ರೈ ಉಪಸ್ಥಿತರಿದ್ದರು.

ಕ್ಲಬ್‌ನ ಅಧ್ಯಕ್ಷೆ ಚಿಂತನಾ ಸುಬ್ರಹ್ಮಣ್ಯ ಸ್ವಾಗತಿಸಿ, ಉಪಾಧ್ಯಕ್ಷೆ ಜಯಮಣಿ ಮಾಧವ ಧನ್ಯವಾದ ಗೈದರು, ಕ್ಲಬ್‌ನ ಸದಸ್ಯರಾದ ಆಶಿತಾ ಕೇಶವ್ ಹಾಗೂ ಶ್ರೀಪಿಯಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿ, ಕ್ಲಬ್‌ನ ಪ್ರಾರ್ಥನೆಯನ್ನು ವಿನುತಾ ಶೇಟ್, ಪ್ರಾರ್ಥನೆಯನ್ನು ಸುಜಾತ ಕಾಮತ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕ್ಲಬ್ ನ ಎಲ್ಲಾ ಸದಸ್ಯರು, ರೋಟರಿ ಸಂಸ್ಥೆಯ ಸದಸ್ಯರು ಹಾಜರಿದ್ದರು.