ಜ. ೧೦ರಂದು ರಾತ್ರಿ ಸುಳ್ಯ ಜಾತ್ರೋತ್ಸವದ ಜನಸಂದಣಿ ಸೇರಿದ್ದ ರಸ್ತೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರ ಕಾರು ಬಂದು ಸಿಲುಕಿಕೊಂಡು ಹೊರಬರಲು ಹರಸಾಹಸಪಟ್ಟ ಘಟನೆ ವರದಿಯಾಗಿದೆ. ರಾತ್ರಿ ಸುಮಾರು ೧೨ ಗಂಟೆಯ ವೇಳೆಗೆ ಶಾಸಕಿ ಭಾಗೀರಥಿಯವರು ತಮ್ಮ ಕಾರಿನಲ್ಲಿ ಎಪಿಎಂಸಿ ರಸ್ತೆಯಾಗಿ ಬಂದರು. ಅಲ್ಲಿ ಬ್ಯಾರಿಕೇಡ್ ಇದ್ದರೂ ಶಾಸಕರು ಕಾರಿನಲ್ಲಿ ಬಂದುದರಿಂದ ಪೊಲೀಸರು ಬ್ಯಾರಿಕೇಡ್ ಸರಿಸಿ ಕಾರನ್ನು ಒಳಬಿಟ್ಟರು. ಆ ರಸ್ತೆಯಲ್ಲಿ ಜನಸಂದಣಿ ಸಾಕಷ್ಟು ಇದ್ದು, ವಾಹನ ಸಂಚಾರ ಹೋಗಲು ಸಾಧ್ಯವೇ ಇಲ್ಲದಂತಾಗಿತ್ತು. ಆದರೆ ಶಾಸಕರ ಕಾರು ಮುಂದೆ ಬರುತ್ತಾ ಚೆನ್ನಕೇಶವ ದೇವರ ಪಕ್ಕದ ವಸಂತ ಕಟ್ಟೆಯ ಬಳಿ ಜನಸಂದಣಿಯ ಮಧ್ಯೆ ಸಿಲುಕುವಂತಾಯಿತು. ಈ ವೇಳೆ ಶಾಸಕರು ಇಳಿದು ದೇವಸ್ಥಾನಕ್ಕೆ ಹೋದರು.
ಅಲ್ಲಿಂದ ಕಾರು ರಥಬೀದಿಯಾಗಿ ರಾಜ್ಯಹೆದ್ದಾರಿ ತಲುಪಿತು. ಜನಸಂದಣಿ ಇರುವಲ್ಲಿ ಶಾಸಕರ ಕಾರು ಬಂದುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.