ಮಡಪ್ಪಾಡಿಯ ಮಹಿಳೆ ಪಂಜದ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

0


ಮಡಪ್ಪಾಡಿಯ ಮಹಿಳೆಯೊಬ್ಬರು ಪಂಜದ ತನ್ನ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮಡಪ್ಪಾಡಿ ಗ್ರಾಮಚ ಚಿರೆಕಲ್ಲು ದಿ. ಶಿವಕುಮಾರ್ ಎಂಬವರ ಪತ್ನಿ ಚಿತ್ರ ಕುಮಾರಿಯವರು ಮೃತಪಟ್ಟ ಮಹಿಳೆ. ಇವರು ಪಂಜದ ಬಾಡಿಗೆ ಮನೆಯಲ್ಲಿದ್ದುಕೊಂಡು ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು.
ವಾರದ ಹಿಂದೆ ಪಂಜದ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿದ್ದರು, ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮೃತರು ತಾಯಿ ರಾಣಿ, ಓರ್ವ ಪುತ್ರ ಗೋಪಿ, ಪುತ್ರಿ ಸ್ವಾತಿಯವರನ್ನು ಅಗಲಿದ್ದಾರೆ.