ಬಿಜೆಪಿ, ಜೆಡಿಎಸ್ ಮೈತ್ರಿ 7 ಸ್ಥಾನ ಗೆದ್ದು ಜಯಭೇರಿ ಕಾಂಗ್ರೆಸ್ ಗೆ 5 ಸ್ಥಾನ
ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಮೈತ್ರಿ 7 ಸ್ಥಾನ ಗೆದ್ದು ಜಯಭೇರಿ ಬಾರಿಸಿದೆ. ಕಾಂಗ್ರೆಸ್ 5 ಸ್ಥಾನ ಸ್ಥಾನ ಗೆದ್ದಿದೆ.
ಇದರೊಂದಿಗೆ ಮೈತ್ರಿ ಪಕ್ಷ ಅತಿ ಹೆಚ್ಚು ನಿರ್ದೇಶಕ ಸ್ಥಾನ ಗೆದ್ದು ಆಡಳಿತ ಹಿಡಿಯುವುದು ಖಚಿತವಾಗಿದೆ.
ಸಾಮಾನ್ಯ ಸ್ಥಾನದಲ್ಲಿ 4 ರಲ್ಲಿ ಮೈತ್ರಿ ವಿಜಯ ಪಡೆದರೆ, ಕಾಂಗ್ರೆಸ್ 2 ಸ್ಥಾನ ಪಡೆದುಕೊಂಡಿತು. ಮಹಿಳಾ ಸ್ಥಾನದಲ್ಲಿ ಎರಡರಲ್ಲಿ ಮೈತ್ರಿ ಒಂದು, ಕಾಂಗ್ರೆಸ್ ಒಂದು ಸ್ಥಾನ ಪಡೆದಿದೆ. ಹಿಂದುಳಿದ ಎ ಯಲ್ಲಿ ಮೈತ್ರಿ ಒಂದು ಸ್ಥಾನ
, ಹಿಂದುಳಿದ ಬಿ ಕಾಂಗ್ರೆಸ್ ಸ್ಥಾನ ಪಡೆದುಕೊಂಡಿತು, ಪ.ಪಂಗಡದಲ್ಲಿ ಕಾಂಗ್ರೆಸ್ ಪಡೆದರೆ , ಪ.ಜಾತಿಯಲ್ಲಿ ಬಿಜೆಪಿ ಪಡೆದುಕೊಂಡಿತು.
ಗೆದ್ದವರ ವಿವರ ಇಂತಿದೆ :
ಸಾಮಾನ್ಯ ಸ್ಥಾನ
1) ರವೀಂದ್ರ ಕುಮಾರ್ ರುದ್ರಪಾದ, ಕಾಂಗ್ರೆಸ್ ( ಮತಗಳು – 659 ), 2) ಜಯಪ್ರಕಾಶ್ ಕೂಜುಗೋಡು, ಬಿ.ಜೆ.ಪಿ. – ಜೆ.ಡಿ.ಎಸ್. ಮೈತ್ರಿ ( 572 ), 3) ವೆಂಕಟೇಶ್ ಎಚ್.ಎಲ್., ಮೈತ್ರಿ ( 556 ), 4) ಕಿರಣ್ ಪೈಲಾಜೆ , ಮೈತ್ರಿ ( 540 ), 5) ಯಶೋದಕೃಷ್ಣ ಕಿಟ್ಟ ನೂಚಿಲ, ಮೈತ್ರಿ ( 500 ), 6) ಸೋಮಶೇಖರ ಕಟ್ಟೆಮನೆ, ಕಾಂಗ್ರೆಸ್ ( ಅಧಿವೇಶನದಲ್ಲಿ( 495)
ಹಿಂದುಳಿದ ವರ್ಗ ಎ
ಗಿರೀಶ್ ಆಚಾರ್ಯ, ಮೈತ್ರಿ ( 557 )
ಹಿಂದುಳಿದ ವರ್ಗ ಬಿ.
ಮೋಹನದಾಸ್ ರೈ , ಕಾಂಗ್ರೆಸ್ ( 542 )
ಮಹಿಳಾ ಮೀಸಲು
ರಮ್ಯಾ ಪೈಲಾಜೆ, ಕಾಂಗ್ರೆಸ್ ( 622 )
ಭಾರತಿ ದಿನೇಶ್, ಮೈತ್ರಿ ( 579 )
ಪ.ಜಾತಿ
ದುಗ್ಗಪ್ಪ ನಾಯ್ಕ ಎಚ್. ಮೈತ್ರಿ ( 566 )
ಪ.ಪಂಗಡ ಮೀಸಲು
ಮಾಧವ ದೇವರಗದ್ದೆ , ಕಾಂಗ್ರೆಸ್ ( 637 )