5 ಲಕ್ಷ ರೂ. ಅನುದಾನದಲ್ಲಿ 87 ಮೀಟರ್ ನಡೆಯಲಿದೆ ಕಾಮಗಾರಿ
ಸುಳ್ಯ ಜೂನಿಯರ್ ಕಾಲೇಜಿನ ಮೊದಲನೇ ಅಡ್ಡ ರಸ್ತೆಗೆ ನಗರ ಪಂಚಾಯತ್ 50ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆಯನ್ನು ಜ.11 ರಂದು ನೆರವೇಸಲಾಯಿತು.
5 ಲಕ್ಷ ರೂ ಅನುದಾನದಲ್ಲಿ 87 ಮೀಟರ್ ಕಾಮಗಾರಿ ನಡೆಯಲಿದ್ದು ಸ್ಥಳೀಯ ನಿವಾಸಿ ಹಿರಿಯರಾದ ಡಿ ಇಬ್ರಾಹಿಂ ಜೂನಿಯರ್ ಕಾಲೇಜ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭ ನಗರ ಪಂಚಾಯತ್ ಸದಸ್ಯರುಗಳಾದ ಡೇವಿಡ್ ದೀರಾಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್ಸ್, ಸ್ಥಳೀಯರಾದ ಎಂ ರಫೀಕ್ ಜೂನಿಯರ್ ಕಾಲೇಜ್,ಎಂ ಹಮೀದ್, ಜಲೀಲ್, ಕಾಂಟ್ರಾಕ್ಟರ್ ಜಹೀರ್ ಮತ್ತು ಊರವರು ಉಪಸ್ಥಿತರಿದ್ದರು.