ಗ್ರೀನ್ ವ್ಯೂ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

0

ಶಾಸಕಿ ಕು.ಭಾಗೀರಥಿ ಮುರಳ್ಯರವರಿಂದ ಶಾಲಾ ಆಡಿಟೋರಿಯಂ ಉದ್ಘಾಟನೆ

ಸುಳ್ಯ: ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ಶಾಲಾ ಆಡಿಟೋರಿಯಂ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರಳ್ಯರವರು ಸಭಾಂಗಣ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ, ಹಾಗೂ ಆಡಳಿತ ಮಂಡಳಿ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರ ಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದ್ರೆ ಹಾಗೂ ನಗರ ಪಂಚಾಯತ್ ಸದಸ್ಯರಾದ ಉಮರ್ ಕೆ ಎಸ್, ಶರೀಫ್ ಎಂ ಕೆ, ಸಿದ್ದೀಕ್ ಕೊಕ್ಕೂ, ಬಾಗವಹಿಸಿ ಶುಭಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.

ಸುಳ್ಯ ಅನ್ಸಾರುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕೊಟ್ಟೆಕಾರ್ ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು , ಪೋಷಕರ ಸಮಿತಿ ಅಧ್ಯಕ್ಷ ಅಧ್ಯಕ್ಷ ಎನ್ ಎ ಅಬ್ದುಲ್ಲ ಹಾಗೂ ಪದಾಧಿಕಾರಿಗಳಾದ ಇಕ್ಬಾಲ್ ಎಲಿಮಲೆ, ಎಸ್‌ ಪಿ ಅಬೂಬಕ್ಕರ್ ,ಎ‌ ಬಿ ಕಮಲ್,ಆಡಳಿತ ಮಂಡಳಿ ಸದಸ್ಯರಾದ ಆದಂ ಹಾಜಿ ಕಮ್ಮಾಡಿ, ಹಮೀದ್ ಜಿ ಎಸ್,ಶಾಫಿ ಕುತ್ತಮೊಟ್ಟೆ,ಉಬೈದುಲ್ಲ,ಎಸ್‌ ಎಮ್ ಹಮೀದ್ ಉಪಸ್ಥಿತರಿದ್ದರು.


ಶಾಲಾ ಪ್ರಾಂಶುಪಾಲ ಇಲ್ಯಾಸ್ ಕಾಶಿಪಟ್ಣ ಸ್ವಾಗತಿಸಿ ಶಾಲಾ ಶಿಕ್ಷಕರಾದ ಅಶ್ವಿನಿ, ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ಷಮತೆ ಮೆಚ್ಚಿ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವನ್ನು ಆಡಳಿತ ಮಂಡಳಿ ಅಭಿನಂದಿಸಿದರು.
ಶಿಕ್ಷಕ‌ ಮಂಜುನಾಥ್ ವಂದಿಸಿದರು.