ಪಂಜದಲ್ಲಿ ಅರಣ್ಯ ಇಲಾಖೆ ಮುಂದೆ ಕಸ್ತೂರಿರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ

0

⬆️ವಿಶ್ವದಲ್ಲಿ ಇಲ್ಲ ಕಾನೂನು ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ:ಕಿಶೋರ್ ಶಿರಾಡಿ

⬆️” ಜೀವ ಬಿಟ್ಟೇವು ಕೃಷಿ ಭೂಮಿ ಬಿಡೆವು: ಚಂದ್ರಶೇಖರ ಬಾಳುಗೋಡು

ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಹಾಗೂ ಪ್ರರಿಭಾದಿತ ಅರಣ್ಯದ ಕಾನೂನಿನಡಿಯಲ್ಲಿ ರೈತರ ಕೃಷಿ ಭೂಮಿಯನ್ನು ಅಕ್ರಮವಾಗಿ ಅರಣ್ಯವೆಂದು ಪರಿಗಣಿಸುವುದನ್ನು ವಿರೋಧಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ಪಂಜ ವಲಯರಣ್ಯಾಧಿಕಾರಿ ಕಛೇರಿ ಎದುರು ರೈತರ ಬೃಹತ್ ಪ್ರತಿಭಟನೆ ಜ.15 ರಂದು ನಡೆಯಿತು.


ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಪಂಜ ವಲಯ ಅರಣ್ಯ ಕಚೇರಿಯ ಎದುರುಗಡೆ ಕಸ್ತೂರಿರಂಗನ್ ವರದಿ ಬಾದಿತ ಗ್ರಾಮಗಳ ರೈತರು ಬೃಹತ್ ಪ್ರತಿಭಟನೆ ನಡೆಯಿತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ಪ್ರರಿಭಾದಿತ ಅರಣ್ಯ ದಡಿಯಲ್ಲಿ ಸೇರಿಸಿರುವ ಸರ್ವೆ ನಂಬರಿನಲ್ಲಿರುವ ಸಾರ್ವಜನಿಕ ಕಟ್ಟಡಗಳು ಹಾಗೂ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಬಿಟ್ಟುಕೊಡಬೇಕು .ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶದಲ್ಲಿ ಇರುವ ಅರಣ್ಯ ದಂಚಿನಲ್ಲಿ ಕೂಡಲೇ ಗಡಿ ಗುರುತು ಮಾಡಬೇಕು ,ಅಲ್ಲದೆ ಆನೆ ದಾಳಿ ಆಗದಂತೆ ಸೋಲಾರ್ ಬೇಲಿಯನ್ನ ಅಳವಡಿಸಬೇಕು .ಕಸ್ತೂರಿ ರಂಗನ್ ವರದಿ ಆಸ್ವಾಭಾವವಿಕವಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಬಾರದೆ ಸರ್ವೆ ಮಾಡಿರುವುದನ್ನು ನಾವುಗಳು ವಿರೋಧಿಸುತ್ತೇವೆ. ಈಗಾಗಲೇ ಅಕ್ರಮ ಸಕ್ರಮದಡಿಯಲ್ಲಿ ಅರಣ್ಯದಂಚಿ ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು ಅದನ್ನು ಅನೋರ್ಜಿತಗೊಳಿಸುವ ಬಗ್ಗೆ ಕೂಡ ಅರಣ್ಯ ಇಲಾಖೆ ಹೊರಟಿರುವುದು ಖಂಡನೀಯ.


ಆದುದರಿಂದ ಈ ಎಲ್ಲ ಸಮಸ್ಯೆಗಳಿಗೆ ಅರಣ್ಯ ಇಲಾಖೆ, ಸರ್ವೆ ಇಲಾಖೆ ,ಹಾಗೂ ಕಂದಾಯ ಇಲಾಖೆಯವರು ಕೂಡಲೇ ಜಂಟಿ ಸರ್ವೆಯನ್ನು ಮಾಡಿ ರೈತರಿಗೆ ನ್ಯಾಯವನ್ನು ಒದಗಿಸಬೇಕಾಗಿ ಒತ್ತಾಯಿಸುತಿದ್ದೇವೆ . ಎಲ್ಲಾ ರೈತರಿಗೂ ಕಾನೂನು ಅರಿವಿದೆ. ಇಡೀ ವಿಶ್ವದಲ್ಲಿ ಇಲ್ಲ ಕಾನೂನುನ್ನು ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ. ಈ ಹೋರಾಟ ನಮಗೆ ನ್ಯಾಯ ಸಿಗುವ ವರೆಗೂ ಹೋರಾಟ ನಡೆಯಲಿದೆ. ಎಂದು ನುಡಿದರು.

ಕಡಬ ತಾಲೂಕು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ “ಕಸ್ತೂರಿರಂಗನ್ ವರದಿಯನ್ನು “ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸ ಬೇಕು. ಈಗ ಅನೇಕರಿಗೆ ಇಲಾಖೆಯಿಂದ ನೋಟೀಸ್ ಕೂಡ ಜಾರಿಯಾಗಿದ್ದು . ಅದನ್ನು ಕೋರ್ಟ್ ಗೆ ಹಾಕಿದ್ದೇವೆ. ಆದರೆ ಇನ್ನೂ ನ್ಯಾಯ ಸಿಕ್ಕಿಲ್ಲ. ಇಲಾಖೆಯವರು, ಜನಪ್ರತಿನಿಧಿಗಳು ಇದನ್ನು ತಡೆಯಲು ಸಾಧ್ಯವಿದೆ” .ಎಂದು ಹೇಳಿದರು

ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಚಂದ್ರಶೇಖರ ಬಾಳುಗೋಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಗೈದು ಮಾತನಾಡಿ ಕಸ್ತೂರಿರಂಗನ್ ವರದಿ ಅವೈಜ್ಞಾನಿಕ ವಾಗಿದೆ. ರೈತರ ಅಭಿಪ್ರಾಯ ಪಡೆಯದೆ ವಿರುದ್ಧವಾದ ವರದಿ. ಇದರ ಜಾರಿ ನಮ್ಮ ಕೃಷಿ ಭೂಮಿಗೆ ಮಾರಕವಾಗುತ್ತದೆ.ನಾವು ರಕ್ಷಿತಾರಣ್ಯಾದಲ್ಲಿ ಮನೆ ಕಟ್ಟಿಲ್ಲ.ನಾವು ಜೀವ ಬಿಟ್ಟೇವು ಕೃಷಿ ಭೂಮಿಯನ್ನು ಬಿಡೆವು. .

ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ರೈತರಿಗೆ ನ್ಯಾಯವನ್ನು ಒದಗಿಸಲು ಕೂಡಲೇ ಜಂಟಿ ಸರ್ವೆ ಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ರಮಾನಂದ ಎಣ್ಣೆಮಜಲು ಮಾತನಾಡಿ
” ಜನಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿ ಜಾರಿಯಾಗುವುದಿಲ್ಲ ಎಂದು ಪತ್ರಿಕೆಯಲ್ಲಿ ಹೇಳುತ್ತಾರೆ. ಆದರೆ ಅಧಿಕಾರ ವರ್ಗದಲ್ಲಿ ವರದಿ ಜಾರಿಗೆ ಅಗುವ ಕೆಲಸಗಳು ನಡೆಯುತ್ತಿದೆ. ಇದನ್ನು ನಾವು ತೀರ್ವವಾಗಿ ಖಂಡಿಸುತ್ತೇವೆ”. ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಮೂಲೆ ಮಜಲು ಸಲಹೆ ಗೀತೆ ಹಾಡಿದರು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ
ಜಯಪ್ರಕಾಶ್ ಕೂಜುಗೋಡು ನಿರೂಪಿಸಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯ ಅಚ್ಚುತ್ತ ಗೌಡ ವಂದಿಸಿದರು.

ಪ್ರತಿಭಟನೆ ಬಳಿಕ ಪಂಜ ಅರಣ್ಯ ಇಲಾಖೆಯ ವಲಯಾರಣ್ಯಧಿಕಾರಿ ಶ್ರೀಮತಿ ಸಂಧ್ಯಾ ಅವರಿಗೆ ಮನವಿ ಅರ್ಪಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು. ಅರಣ್ಯ
ಇಲಾಖೆಯ ಸಿಬ್ಬಂದಿಗಳು, ಮೆಲೆನಾಡ ಜನ ಹಿತರಕ್ಷಣಾ ಸಂಘದ ಬಳ್ಪ,ಕೇನ್ಯ ಗ್ರಾಮದ ರೈತರು ಸೇರಿದಂತೆ ಮಲೆನಾಡ ಜನ ಹಿತರಕ್ಷಣಾ ವೇದಿಕೆಯ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.