ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಸಂಪನ್ನ

0

ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದಲ್ಲಿ ಜ.14 ರಂದು ಧನುಪೂಜೆ ಸಂಪನ್ನವಾಯಿತು.

ಡಿ.16 ರಿಂದ ಆರಂಭವಾಗಿ
ಜ.14 ರವರೆಗೆ ಪ್ರತಿದಿನ ಬೆಳಗ್ಗೆ ಧನುಪೂಜೆ ನಡೆಯಿತು.

ಅಲ್ಲದೆ ಕೊನೆಯ ದಿನ ಉಧ್ಯಾಪನ ಧ‌ನುಪೂಜೆ ನಡೆಯಿತು. ಮಧ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಮತ್ತು ವನಭೋಜನ ಕಾರ್ಯಕ್ರಮ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕೂಜುಗೋಡು, ಸದಸ್ಯರು, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಷಪ್ಪ ಕಿರಿಭಾಗ, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.