ಸಂಸದರ ಸೂಚನೆ ಶೀಘ್ರ ಸ್ಪಂದನೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಮಾನವೀಯ ನೆಲೆಯಲ್ಲಿ, ಕಾನೂನಾತ್ಮಕವಾಗಿ
ಮತ್ತೆ ಅವಕಾಶ ನೀಡುವಂತೆ
ಸಂಸದ ಬ್ರಿಜೇಶ್ ಚೌಟರ ಸೂಚನೆಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದ್ದಾರೆ.
ಜ. 14 ರಂದು ಬೀದಿ ಬದಿಯಲ್ಲಿ ಅಂಗಡಿಗೆ ಸ್ಥಳ ನಿಗಧಿ ಮಾಡಿ ಮಾರ್ಕ್ ಮಾಡಲಾಗಿದೆ, ಹಂಚಿಕೆಯಷ್ಟೆ ಬಾಕಿ ಇದೆ. ಈ ಮಧ್ಯೆ ಕಾಂಗ್ರೆಸ್ ನಿಯೋಗವೊಂದು ಅಧಿಕಾರಿಗಳನ್ನು ಭೇಟಿ ಮಾಡಿದ್ದು ಸ್ಥಳೀಯರಿಗೆ ಹಾಗೂ ಈ ಹಿಂದೆ ಅಂಗಡಿ ಹೊಂದಿದ್ದವರಿಗೆ ಆದ್ಯತೆ ಮೇರೆಗೆ ನೀಡುವಂತೆ ಕೋರಿದ್ದಾರೆ.