ಅಟೋದಲ್ಲಿ ಸಿಕ್ಕ ಪರ್ಸನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ

0

ಆಲೆಟ್ಟಿಯ ಮಿತ್ತಡ್ಕ ರೋಟರಿ ಶಾಲೆ ಬಳಿಯ ನಿವಾಸಿ ಸುಂದರ ಎಂಬವರು‌ ತನ್ನ ಅಟೋ ದಲ್ಲಿ ಬಿಟ್ಟು ಹೋದ ಪರ್ಸನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.


ಕರ್ಲಪ್ಪಾಡಿಯ ಸುಬ್ಬಮ್ಮ ಎಂಬವರು ಅಟೋ ದಲ್ಲಿ ತನ್ನ ಪರ್ಸನ್ನು ಮರೆತು ಹೋಗಿದ್ದರು. ಈ ಬಗ್ಗೆ ಸುದ್ದಿ ವೆಬ್ ಸೈಟಿನಲ್ಲಿ ವರದಿ ಪ್ರಕಟಿಸಲಾಗಿತ್ತು.

ಇದನ್ನು ಗಮನಿಸಿದ ಅಟೋ ಚಾಲಕ ಸುಂದರ ಮಿತ್ತಡ್ಕ ರವರು ಸುದ್ದಿ
ಕಚೇರಿಗೆ ಪರ್ಸನ್ನು ತಂದೊಪ್ಪಿಸಿದ್ದರು.
ಬಳಿಕ ದೂರವಾಣಿ ಮೂಲಕವಾರಸುದಾರರಿಗೆ ಮಾಹಿತಿನೀಡಿ ಪರ್ಸನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.