ದಕ್ಷಿಣ ಭಾರತ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ರವರು ಜ.10,11 ಮತ್ತು 12 ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಸಿದ ಮೊದಲನೆ ಸೌತ್ ಏಶಿಯಾ ಮಾಸ್ಟರ್ ಅಥ್ಲೆಟಿಕ್ ಮುಕ್ತ ಚಾಂಪಿಯನ್ ಶಿಪ್- 2025 ರಲ್ಲಿ ಭಾಗವಹಿಸಿದ ಐವರ್ನಾಡಿನ ಪ್ರವೀಣ್ ಕುಮಾರ ಪವಿತ್ರಮಜಲು ಇವರು ಹ್ಯಾಮರ್ ತ್ರೋ ನಲ್ಲಿ 4ನೇ ಸ್ಥಾನ ಮತ್ತು ಶಾಟ್ ಪುಟ್ ನಲ್ಲಿ 7ನೇ ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ್ದಾರೆ.
ಹಾಗೆಯೇ ಇತ್ತೀಚೆಗೆ ಕೊಡಗು ಮಾಸ್ಟರ್ಸ್ ಅಸೋಸಿಯೇಷನ್ ರವರು ಪೊನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಸಿದ ಅಂತರ್ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡುಎಸೆತ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಇವರು ನಿವೃತ್ತ ಮುಖ್ಯ ಅಧ್ಯಾಪಕ ದಿ.ಪಿ.ಯಸ್.ದೇವಪ್ಪ ಗೌಡರವರ ಪುತ್ರ.