ಮಂಡೆಕೋಲು ವಾರ್ಷಿಕ ‌ಕ್ರೀಡಾಕೂಟ

0

ಮಂಡೆಕೋಲು ಸ.ಉ.ಹಿ.ಪ್ರಾ.ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಜ.13ರಂದು‌ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಕ್ರೀಡಾಕೂಟ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ‌ ವಹಿಸಿದ್ದರು.

ಗೌಡ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಮಂಜುಳಾ, ಧರ್ಮಸ್ಥಳ ಗ್ರಾ. ಯೋ. ಸೇವಾ ಪ್ರತಿನಿಧಿ ವೇದಾವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಮಂಜುಳಾ‌ ಮಿತ್ತಿಲ, ಪಂಚಾಯತ್ ಸದಸ್ಯ ಅನಿಲ್, ಎಸ್.ಡಿ.ಎಂ.ಸಿ.‌ಸದಸ್ಯರು, ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಹಿರಿಯ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಮುಖ್ಯ ಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ಪ್ರಮೀಳಾ ಎಂ. ವಂದಿಸಿದರು. ಶಿಕ್ಷಕ ರಮೇಶ್ ಜಿ.ಎನ್. ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ಚಸ್ಮಿತಾ, ನಳಿನಿ, ವನಿತಾ‌ ಸಹಕರಿಸಿದರು.