ವಿವಿಧ ಸಾದಾತ್ಗಳು, ಉಲಮಾ, ಉಮರಾ ನಾಯಕರುಗಳ ಉಪಸ್ಥಿತಿಯಲ್ಲಿ ಉದ್ಘಾಟನೆ
ಕಾರ್ಯಕ್ರಮದ ಬಗ್ಗೆ ಆಯೋಜಕರಿಂದ ಪತ್ರಿಕಾಗೋಷ್ಠಿ
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕಳೆದ ಒಂದು ದಶಕ್ಕೂ ಹೆಚ್ಚು ಕಾಲದಿಂದ ಕಾರ್ಯಾಚರಿಸಿಕ್ಕೊಂಡು ಬರುತ್ತಿರುವ ದಾರುಲ್ ಹಿಕ್ಮ ಎಜ್ಯುಕೇಶನಲ್ ಸೆಂಟರ್ ರಿ. ಇದರ ಹಿಫ್ಲ್ ಮತ್ತು ದರ್ಸ್ ವಿಧ್ಯಾರ್ಥಿಗಳ ಮೇಲಂತಸ್ತಿನ ಹಾಸ್ಟೆಲ್ ಕಟ್ಟಡದ ಉದ್ಘಾಟನಾ ಸಮಾರಂಭ ಜ. ೨೦ ರಂದು ಸಂಜೆ ನಡೆಯಲಿದೆ ಎಂದು ಜ ೧೬ ರಂದು ಸಂಸ್ಥೆಯ ಆಡಳಿತ ಸಮಿತಿಯ ಮುಖಂಡರುಗಳು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸೌದಿ ನ್ಯಾಷನಲ್ ಕಮಿಟಿ ಕೋಶಾಧಿಕಾರಿ ಸಾಲಿಹ್ ಬೆಳ್ಳಾರೆ ರವರು ‘ಬೆಳ್ಳಾರೆ ಪಟ್ಟಣದ ಹೃದಯ ಭಾಗದಲ್ಲಿ ೨೦೧೨ ರಲ್ಲಿ ಮತ ಮತ್ತು ಲೌಕಿಕ ಸಮನ್ವಯ ಶಿಕ್ಷಣದ ಆಶಯದೊಂದಿಗೆ ಹುಟ್ಟಿಕೊಂಡ ದಾರುಲ್ ಹಿಕ್ಮ ಎಜುಕೇಷನಲ್ ಸೆಂಟರ್ ೨೦೧೨ ರಲ್ಲಿ ಸಯ್ಯದ್ ಕೂರತ್ ತಂಙಳ್ ಅವರ ದಿವ್ಯ ಹಸ್ತದಿಂದ ಹಸ್ಸನ್ ಸಖಾಫಿ ಬೆಳ್ಳಾರೆ ಅಧ್ಯಕ್ಷರಾಗಿಯೂ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್ ಪ್ರಧಾನ ಕಾರ್ಯದರ್ಶಿಯಾಗಿ ಮೊದಲಿಗೆ ಹಿಫುಲ್ ಖುರಾನ್ ಕಾಲೇಜು ಆರಂಭಗೊಂಡಿತು.
೨೦೧೪ ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅದೀನದಲ್ಲಿ ಆರೇಬಿಕ್ ಮದರಸ, ಮಕ್ಕಳಿಗಾಗಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೀಗೆ ಸಂಸ್ಥೆ ಬೆಳೆಯುತ್ತಾ ಬಂದಿದೆ.
ಆರಂಭದಲ್ಲಿ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಸ್ಥೆಯಲ್ಲಿ ಹಿಫ್ಲ್ ಮತ್ತು ಮದರಸ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು ಇಂಗ್ಲಿಷ್ ಮೀಡಿಯಂ ನಲ್ಲಿ ಮಾತ್ರ ಸಣ್ಣ ಮೊತ್ತದ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದೆ.
ಸಂಸ್ಥೆಯ ಬೆಳವಣಿಗೆಯಲ್ಲಿ ದಾನಿಗಳ ಸಹಾಯವೇ ಮುಖ್ಯ ಆದಾಯವಾಗಿದೆ.
೨೦೧೫ ರಲ್ಲಿ ಮಾಸ್ತಿಕಟ್ಟೆ ಇಸ್ಮಾಯಿಲ್ ಹಾಜಿರವರು ಮರಣ ಹೊಂದಿದಾಗ ಅವರ ಪತ್ನಿ ಮತ್ತು ಮಕ್ಕಳು ದೇಣಿಗೆಯಾಗಿ ನೀಡಿದ ೨೫ ಸೆಂಟ್ಸ್ ಸ್ಥಳದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದ್ದು ಇದೀಗ ಸಂಸ್ಥೆಯು ವಿಸ್ತಾರವಾಗಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ.
ಸಂಸ್ಥೆಯ ಸಹಾಯಕ್ಕಾಗಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಮೊದಲನೆಯದಾಗಿ ಗಲ್ಫ್ ಘಟಕ ಆರಂಭವಾಗಿ ಪ್ರಸ್ತುತ ವಿದೇಶಗಳ ಅನೇಕ ಪ್ರದೇಶಗಳಿಗೆ ವ್ಯಾಪಿಸಿ,ಇದೀಗ ಸಯ್ಯದ್ ಕಾಜೂರ್ ತಂಙಳ್ ಅವರ ನೇತೃತ್ವದಲ್ಲಿ ಸಂಸ್ಥೆಯು ಅಭಿವೃದಿಯ ಪಥದಲ್ಲಿ ಮುಂದುವರೆಯುತ್ತಿದೆ. ಎರಡು ವರ್ಷಗಳ ಹಿಂದೆ ದಾರುಲ್ ಹಿಕ್ಮ ಸೌದಿ ನ್ಯಾಷನಲ್ ಸಮಿತಿಯು ಆರಂಭಿಸಿದ ೨೦೦೦ sq ಫೀಟ್ ನ ಹಿಫ್ಲ್ ಮತ್ತು ದರ್ಸ್ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಪ್ರಸ್ತುತ ಪೂರ್ಣ ಗೊಂಡಿದ್ದು ಜನವರಿ ೨೦ ಸೋಮವಾರ ಸಯ್ಯದ್ ಕಾಜೂರ್ ತಂಙಳವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಾಗೂ ಸಂಸ್ಥೆಯಲ್ಲಿ ಕಲಿತು ಸಂಪೂರ್ಣವಾಗಿ ಖುರಾನ್ ಕಂಠಪಾಠ ಮಾಡಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸನದುದಾನ ವಿತರಣೆಯೂ ನಡೆಯಲಿದೆ.
ಇದರ ಅಂಗವಾಗಿ ಸಂಜೆ ೪:೩೦ ಕ್ಕೆ ಸರಿಯಾಗಿ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝ?ನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಸಭಾ ಕಾರ್ಯಕ್ರಮ ರಾತ್ರಿ ೭:೩೦ಕ್ಕೆ ಆರಂಭಗೊಳ್ಳಲಿದ್ದು ಅಧ್ಯಕ್ಷತೆ ಮತ್ತು ಸನಾದುದನವನ್ನು ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಝ?ನುಲ್ ಆಬಿದೀನ್ ತಂಙಳ್ ಕಾಜೂರ್ ನಿರ್ವಹಿಸಲಿದ್ದಾರೆ.
ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಸಯ್ಯದರು, ಉಲಮಾಗಳು,ಉಮಾರಾ ನೇತಾರರು, ಗಲ್ಫ್ ಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ ಬೆಳ್ಳಾರೆ, ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮ್ಯಾನ್ ಅಬ್ದುಲ್ ಹಮೀದ್ ಅಲ್ಪಾ,
ಕನ್ವಿನರ್ ಮುಸ್ತಫಾ ಮಾಸ್ತಿಕಟ್ಟೆ,ಸದಸ್ಯರು ಹಾಜಿ ಯೂಸುಫ್ ಚೆನ್ನಾರ್,
ಕಟ್ಟಡ ನಿರ್ಮಾಣ ಸಮಿತಿ ಉಸ್ತುವಾರಿ ಹಸ್ಸನ್ ಹಾಜಿ ಇಂದ್ರಾಜೆ ಉಪಸ್ಥಿತರಿದ್ದರು.