ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 11 ಮಂದಿ ನಿರ್ದೇಶಕರು ಅವಿರೋಧ ಆಯ್ಕೆ

0

ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 11 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.
ಸಂಘದ ಆಡಳಿತ ಅವಧಿ ಮುಗಿದಿದ್ದು ನೂತನ ನಿರ್ದೇಶಕರ ಆಯ್ಜೆಗಾಗಿ ಜ.18 ರಂದು ನಿರ್ದೇಶಕರ ಆಯ್ಕೆಗೆ ಚುನಾವಣೆಗೆ ನಿಗದಿಯಾಗಿದ್ದು ಹನ್ನೊಂದು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದು
ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.


13 ಮಂದಿ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಹನ್ನೊಂದು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.


ಸಾಮಾನ್ಯ ಕ್ಷೇತ್ರದಿಂದ ವಸಂತ ನೆಟ್ಟಾರು,ವಿ.ಕಿರಣ್ ಶೆಟ್ಟಿ ವೈಪಾಲ,ಶ್ರೀಧರ ನುರ್ಗೆತ್ತಡಿ,ವಸಂತ ಎನ್, ಎಂ.ಲಕ್ಷ್ಮೀನಾರಾಯಣ ಶ್ಯಾನುಭೋಗ್, ಲೋಕೇಶ ಪೂಜಾರಿ ನೆಟ್ಟಾರು,ಯತೀಶ್ ರೈ ದೇವರಗುಂಡಿ, ಮಹಿಳಾ ಮೀಸಲು ಸ್ಥಾನದಿಂದ ಶಾರದಾ ಕೋಡಿಯಡ್ಕ,ಉಮಾದೇವಿ ಶಾಂತಿಮೂಲೆ,ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಕುಶಾಲಪ್ಪ ಕೋಡಿ,ಹಿಂದುಳಿದ ವರ್ಗ ಬಿ ಸ್ಥಾನದಿಂದ ಭಾಸ್ಕರ ನೆಟ್ಟಾರು ಆಯ್ಕೆಯಾದರು.


13 ಮಂದಿ ನಿರ್ದೇಶಕರ ಸ್ಥಾನವಿದ್ದು 11 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮೀಸಲು ಸ್ಥಾನ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದಿರುವುದರಿಂದ ಎರಡು ಸ್ಥಾನದಿಂದ ನಿರ್ದೇಶಕರ ಆಯ್ಕೆಯಾಗಲಿಲ್ಲ.