ಅರಂತೋಡು ಎನ್ಬೆಂಪಿಯು ಕಾಲೇಜು ನೂತನ ಸಭಾಭವನಕ್ಕೆ ಧರ್ಮಸ್ಥಳ‌ ಕ್ಷೇತ್ರದಿಂದ ರೂ.1ಲಕ್ಷ – ಮಂಜೂರಾತಿ ಪತ್ರ ಹಸ್ತಾಂತರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯ ಅರಂತೋಡು ಕಾರ್ಯಕ್ಷೇತ್ರದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಸಭಾಭವನ ನಿರ್ಮಾಣಕ್ಕೆ ಯೋಜನೆಯಿಂದ ಮಂಜೂರು ಮಾಡಿದ 100000 ರೂಪಾಯಿ ಮೊತ್ತದ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡರವರು ಸಮಿತಿಯ ಸಂಚಾಲಕರಾದ ಕೆ.ಆರ್. ಗಂಗಾಧರ್ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಕೇಶವ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ, ಸೋಮಶೇಖರ್ ಪೈಕ, ಶೇಷಗಿರಿ ಯು ಎಂ, ತೀರ್ಥರಾಮ ಅಡ್ಕಬಳೆ, ಭಾರತಿ ಪುರುಷೋತ್ತಮ್, ರೀನಾ ಚಂದ್ರಶೇಖರ್, ಪುಷ್ಪಾ ಮೇದಪ್ಪ, ಪುನೀತ್ ಬೆಟ್ಟನ, ಅರಂತೋಡು ಒಕ್ಕೂಟ ಅಧ್ಯಕ್ಷರಾದ ರತ್ನಾವತಿ ಅಳಿಕೆ, ಹಾಗೂ ಕಾಲೇಜಿನ ಅಧ್ಯಾಪಕ ವೃಂದದವರು ಹಾಗೂ ವಲಯ ಮೇಲ್ವಿಚಾರಕರಾದ ಗಂಗಾಧರ್ ಮತ್ತು ಸೇವಾಪ್ರತಿನಿಧಿ ಸುಪ್ರಿತ ಕೆ ಉಪಸ್ಥಿತರಿದ್ದರು.