ಶತಮಾನೋತ್ಸವ ಸಮಿತಿಯಿಂದ ಪತ್ರಿಕಾಗೋಷ್ಠಿ
ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು ಜ. ೨೪ ಮತ್ತು ೨೫ ರಂದು ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎ.ವಿ. ತೀರ್ಥರಾಮ ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು.
೧೯೨೦ರಲ್ಲಿ ದಿ.ಅಹಮ್ಮದ್ ಸಾಹುಕಾರ್ ರವರು ಸ್ಥಳದಾನ ಮಾಡಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶಾಲೆಯು ಶತ ವರ್ಷವನ್ನು ದಾಟಿ ಮುನ್ನಡೆದಿದ್ದು ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದೆ. ಇದೀಗ ಶತಮಾನೋತ್ಸವದ ಅಂಗವಾಗಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸರಕಾರ, ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಸುಮಾರು ಒಂದು ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶತಮಾನೋತ್ಸವ ಸ್ಮಾರಕ ಸಭಾಭವನ, ನೂತನ ರಂಗಮಂದಿರ, ನೂತನ ತರಗತಿ ಕೊಠಡಿಗಳ ನಿರ್ಮಾಣ ಮಾಡಲಾಗಿದೆ.
ತರಗತಿ ಕೊಠಡಿಗಳನ್ನು ನವೀಕರಣ ಮಾಡಲಾಗಿದೆ. ಪ್ರಾಣಿಗಳ ಮೂರ್ತಿಚಿತ್ರಗಳಿರುವ ಆಕರ್ಷಕ ಉದ್ಯಾನವನ, ದ್ವಾರ ನಿರ್ಮಿಸಲಾಗಿದೆ. ಇಂಟರ್ಲಾಕ್ ಅಳವಡಿಸಲಾಗಿದೆ ಹೀಗೆ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.೨೪ ರಂದು ಬೆಳಿಗ್ಗೆ ೯:೩೦ಕ್ಕೆ ಆಕರ್ಷಕ ಮೆರವಣಿಗೆಯೊಂದಿಗೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ರಾಜ್ಯ ವಿಧಾನಸಭಾಧ್ಯPರಾದ ಯು. ಟಿ.ಖಾದರ್ ಅವರು ಶತಮಾನೋತ್ಸವ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಶತಮಾನೋತ್ಸವ ಸಮಾರಂಭವನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷ ಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷ ತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸಭಾ ಸದಸ್ಯರಾದ ಜಗ್ಗೇಶ್, ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಸಚಿವ ಎಸ.ಅಂಗಾರ, ವಿಧಾನಸಭಾ ಸದಸ್ಯರಾದ ಎಸ್ ಎಲ್ ಭೋಜೇಗೌಡ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್, ಜಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯP ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕೋಟೆಮಲೆ, ಎಒಎಲಇ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ.ಎನ್ ಮನ್ಮಥ, ತಹಸಿಲ್ದಾರ್ ಮಂಜುಳ ಎಂ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಯುಕೆ, ವೀಣಾ ಎಂ ಟಿ, ಬಾಲಕೃಷ್ಣ ಬೊಳ್ಳೂರು ಭಾಗವಹಿಸಲಿದ್ದಾರೆ.
ಉದ್ಘಾಟನೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ೬.೩೦ರಿಂದ ಸಭಾ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಾಲಾ ಎಸ್ ಡಿಎಂಸಿ ಅಧ್ಯP ಜಯಾನಂದ ಪಟ್ಟೆ ಅಧ್ಯPತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ದೇವಚಳ್ಳ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಸೇವಾಜೆ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಉಪಾಧ್ಯಕ್ಷೆ ವಂದನಾ ಹೊಸ್ತೋಟ, ಪ್ರಮುಖರಾದ ವೆಂಕಟ್ ವಳಲಂಬೆ, ಪಿ.ಸಿ.ಜಯರಾಮ, ವಿಷ್ಣು ಭಟ್ ಮೂಲೆತೋಟ, ಮೋಹನ್ ರಾಮ್ ಸುಳ್ಳಿ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಲೋಕೇಶ್ ಅಂಬೆಕಲ್ಲು, ಪುರುಷೋತ್ತಮ ಗೌಡ ಕೇಪಳಕಜೆ, ಧನಂಜಯ ಬಾಳೆತೋಟ, ಗದಾಧರ ಬಾಳುಗೋಡು, ಹಮೀದ್ ವೈ. ಎಂ. ಭಾಗವಹಿಸಲಿzರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜ.೨೫ರಂದು ಬೆಳಗ್ಗೆ ೧೦ರಿಂದ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ನಡೆಯಲಿದೆ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ ಅಧ್ಯಕ್ಷ ತೆ ವಹಿಸುವರು. ನಾರಾಯಣ ಗೌಡ ಬಾಳೆತೋಟ ಉದ್ಘಾಟಿಸುವರು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷ ಕ ಕೆ.ಆರ್. ಗಂಗಾಧರ ಆಶಯ ಭಾಷಣ ಮಾಡಲಿದ್ದಾರೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಸಂಜೆ ಏಳರಿಂದ ಶತಮಾನೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ ತೀರ್ಥರಾಮ ಅಧ್ಯಕ್ಷ ತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನ ನೆರವೇರಿಸುವರು.
ವಿಶೇಷ ಆಹ್ವಾನಿತರಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಭಾಗವಹಿಸುವರು. ರಬ್ಬರ್ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಮುಳಿಯ ಕೇಶವ ಭಟ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕೇರ, ರಾಜೇಶ್ವರಿ ಮಾವಿನಕಟ್ಟೆ, ಪ್ರಮುಖರಾದ ನಿತ್ಯಾನಂದ ಮುಂಡೋಡಿ,ವೆಂಕಟ್ ದಂಬೆಕೋಡಿ, ಚಂದ್ರಶೇಖರ ತಳೂರು, ಪಿಡಿಒ ಬಿ.ಗುರುಪ್ರಸಾದ, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷ ಕಿ ಸಂಧ್ಯಾ ಭಾಗವಹಿಸಲಿದ್ದಾರೆ ಎಂದು ಎ.ವಿ.ತೀರ್ಥರಾಮ ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಜ.೨೪ರಂದು ಮಧ್ಯಾಹ್ನ ೨ರಿಂದ ವಿದುಷಿ ರೇಖಾ ರೇವತಿ ಹೊನ್ನಾಡಿ ನಿರ್ದೇಶನದಲ್ಲಿ ರಂಜನಿ ಸಂಗೀತ ಸಭಾ ಇದರ ವಿದ್ಯಾರ್ಥಿಗಳಿಂದ ಗಾನಸುಧೆ ಕಾರ್ಯಕ್ರಮ, ಸಂಜೆ ೪ ರಿಂದ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ರಾತ್ರಿ ೯.೩೦ ರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಹಾಗೂ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜ. ೨೫ರಂದು ಮಧ್ಯಾಹ್ನ ೨ ರಿಂದ ಶಾರದಾಂಬಾ ಯಕ್ಷ ಗಾನ ಅಧ್ಯಯನದಿಂದ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಯಕ್ಷ ಗಾನ ಶ್ರೀ ರಾಮಾಯಣ ಸಂಜೆ ೫ ರಿಂದ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ ೧೦ ರಿಂದ eನ ದೀಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ. ರಾತ್ರಿ ೧೧.೩೦ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ಮುರಳಿ ಈ ಪಿರಾ ಬರೋಲಿ ನಾಟಕ ನಡೆಯಲಿದೆ ಎಂದು ಎ.ವಿ.ತೀರ್ಥರಾಮ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ ಶಾಲಾ ಮುಖೋಪಾಧ್ಯಾಯ ಶ್ರೀಧರ ಗೌಡ ಕೆ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಮೆತಡ್ಕ, ಖಜಾಂಜಿ ಕೆ.ಆರ್.ರಾಧಾಕೃಷ್ಣ ಮಾವಿನಕಟ್ಟೆ, ಕಾರ್ಯದರ್ಶಿ ಜಯಂತ ತಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ. ಕಾರ್ಯದರ್ಶಿ ರಾಜಗೋಪಾಲ ಉಪಸ್ಥಿತರಿದ್ದರು.
ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು :
ದಿ.ಪಿ ಚಿನ್ನಪ್ಪ ಗೌಡ, ದಿ .ಎಂ ಸೀತಾರಾಮ ಗೌಡ, ದಿ ಎಂ ಪದ್ಮಯ್ಯ ಗೌಡ, ದಿ ಎ ಗಣಪಯ್ಯ ಗೌಡ, ದಿ ವೈ ಕುಂಞ ಪ್ಪ ಗೌಡ, ದಿ ಸಿ ಹೆಚ್ ಬಾಲಕೃಷ್ಣ ಗೌಡ, ದಿ ಡಿ ತೀರ್ಥರಾಮ, ದಿ ರಾಮ ಅಜಿಲ, ದಿ ಗಣಪತಿ ಗೌಡ ಚಾಂತಾಲ, ದಿ ತಿಮ್ಮಪ್ಪ ಗೌಡ, ದಿ ಈಶ್ವರ ಗೌಡ, ದಿ ಕೆ ಸದಾನಂದ ಗೌಡ, ದಿ ಕೆ ಗೋವಿಂದ ಭಟ್ ಕಣಪಿಲ, ನೀಲಮ್ಮ ಪಿ., ಬಿ ದೇವಪ್ಪ ಗೌಡ, ಎಂ ಸುಂದರ, ಕೆ ಸೋಮಣ್ಣ ಗೌಡ, ಗಣಪಯ್ಯ ಆಚಾರಿ, ಬೊಳಿಯಮ್ಮ, ಬಿ ಯಶೋಧ, ಶಶಿಕಲಾ ಭಟ್, ಡಿ.ಆರ್.ಜಯಕುಮಾರ್, ಎಚ್ ಲಿಂಗಪ್ಪ ಗೌಡ, ಎನ್ ಜಿ ಸುಖಲತ, ನಾಗವೇಣಿ ಕೆ., ಶಾರದಾ ಜಿ ಎಂ., ಶ್ರೀಮತಿ ಎ., ಶ್ರೀಮತಿ ರತ್ನಾವತಿ ಕೆ., ಚಂದ್ರಶೇಖರ ಕೆ., ಚಂದ್ರಶೇಖರ ವಿ., ಶಶಿಕಲಾ ಪಿ., ಸಂತೋಷ್, ನಯನ ಕೆ ನಾಯ್ಕ, ರೂಪವಾಣಿ ಬಿ. ಕೃಷ್ಣಯ್ಯ ನಾಯಕ್ , ಚಂದ್ರಕಲಾ ಕೆ ಸಿ, ಲೋಲಾಕ್ಷಿ ಪಿ., ಚಿನ್ನಮ್ಮ,, ಯಶೋಧ ಎ ಎಸ್., ವಾಸು ಗೌಡ
ಪ್ರಸ್ತುತ ಸೇವೆ : ಶ್ರೀಧರ ಗೌಡ ಕೆ., ಶಾರದಾ ಟಿ., ರೋಹಿಣಿ ಕೆ., ಹರಿಣಾಕ್ಷಿ ಹೆಚ್‌ಎಸ್., ಹರಿಣಾಕ್ಷಿ ಪಿ ಎ., ಜೀವನ್ ಕುಮಾರ್ ಟಿ, ಜ್ಯೋತಿ ಎಸ್. ವಿಜಯಶ್ರೀ ಜಿ ಎಲ್., ಲಲಿತಾ ಆರ್., ಶ್ರಾವ್ಯ ಎ ಎಸ್. ಹಾಗೂ ಅನೇಕ ಗೌರವ ಶಿPಕರಾಗಿ ಸೇವೆ ಸಲ್ಲಿಸಿರುತ್ತಾರೆ.