ಆನೆಗಳಿಂದ ಕೃಷಿ ಹಾನಿ – ಶಾಶ್ವತ ಪರಿಹಾರ ದೊರಕಿಸಿ
ಸುಳ್ಯ- ಮಂಡಕೋಲು ಮುಖ್ಯ ರಸ್ತೆಯ ಅಡ್ಪಂಗಾಯದಿಂದ ಮಂಡೆಕೋಲು ತನಕ ದ್ವಿಪದ ರಸ್ತೆ ನಿರ್ಮಾಣ ಸೇರಿದಂತೆ ಗ್ರಾಮ ವ್ಯಾಪ್ತಿಯ ಹಾಗೂ ಅಂತರಾಜ್ಯ ರಸ್ತೆಗಳ ಅಭಿವೃದ್ದಿ, ಸೇತುವೆ ನಿರ್ಮಾಣಕ್ಕಾಗಿ ಅನುದಾನಕ್ಕೆ ಒತ್ತಾಯಿಸಿ ಮಂಡೆಕೋಲು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಹಾಗೂ ಸುರೇಶ್ ಕಣೆಮರಡ್ಕ ನೇತೃತ್ವದಲ್ಲಿ ಸಂಸದ ಬ್ರಿಜೇಶ್ ಚೌಟರಿಗೆ ಜ.24ರಂದು ಮನವಿ ಸಲ್ಲಿಸಲಾಗಿದೆ.
ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮಂಡೆಕೋಲುನಿಂದ 3 ಗ್ರಾಮಗಳನ್ನು ಒಳಗೊಂಡ ಶಿವಾಜಿನಗರ ಪಾತಿಕಲ್ಲು ಕೋಲ್ಕಾರುವರೆಗಿನ ರಸ್ತೆಗೆ ಕಾಂಕ್ರಿಟೀಕರಣ, ಮಂಡೆಕೋಲು ಗ್ರಾಮದ ಮೈತ್ತಡ ಪಂಜಿಕಲ್ಲು ಸಂಪರ್ಕ ಕಲ್ಪಿಸಲು ಪಯಸ್ವಿನಿ ನದಿಗೆ ಸೇತುವೆ ನಿರ್ಮಾಣ,
ಚೆರ್ಕಳ – ಜಾಲ್ಸೂರು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಮರ್ಜಿಗೆ ಭೂ. ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಬೇಕು,
ಮಂಡೆಕೋಲು ಗ್ರಾಮದ ಕನ್ಮಾನ-ಕಲ್ಲಡ್ಕ -ಅಕ್ಕಪ್ಪಾಡಿ ರಸ್ತೆಗೆ ಕಾಂಕ್ರಿಟೀಕರಣ,
ಮುರೂರು – ಮಂಡೆಕೋಲು ರಸ್ತೆಗೆ ಆಯ್ದ ಭಾಗಗಳಲ್ಲಿ ಕಾಂಕ್ರಿಟೀಕರಣ,
ಮಂಡೆಕೋಲು-ಮೈತ್ತಡ ಪದವು ರಸ್ತೆಗೆ ಕಾಂಕ್ರಿಟೀಕರಣ,
ಮಂಡಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ, ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯ ಗಮನಹರಿಸುವುದು ಹೀಗೆ ವಿವಿಧ ಭೇಡಿಯನ್ನು ಸಂಸದರ ಮುಂದಿರಿಸಲಾಗಿದೆ.